ಪ್ರಸಿದ್ಧ ನೃತ್ಯಪಟು ಡಾ.ಯಾಮಿನಿ ಕೃಷ್ಣಮೂರ್ತಿ ನಿಧನ.
ಪ್ರಸಿದ್ಧ ನೃತ್ಯಪಟು ಡಾ.ಯಾಮಿನಿ ಕೃಷ್ಣಮೂರ್ತಿ ನಿಧನ.
ನವದೆಹಲಿ: ಪ್ರಖ್ಯಾತ ಕಿರಿಯ ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ ಡಾ. ಯಾಮಿನಿ ಕೃಷ್ಣಮೂರ್ತಿ ಶನಿವಾರ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋ ಸಹಜ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದವರು ಕಳೆದ ಏಳು ತಿಂಗಳಿನಿಂದ ಐಸಿಯು ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಯಾಮಿನಿ ಅವರ ಪಾರ್ಥಿವ ಶರೀರವನ್ನು ದೆಹಲಿಯ ಹೌಸ್ ಖಾಸ್ ನಲ್ಲಿನ ‘ ಯಾಮಿನಿ ಸ್ಕೂಲ್ ಆಫ್ ಡ್ಯಾನ್ಸ್ ‘ ಗೆ ಇಂದು ಬೆಳಿಗ್ಗೆ ಕರೆತರಲಾಯಿತು.
ಯಾಮಿನಿ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ 1940 ಡಿಸೆಂಬರ್ 26ರಂದು ಜನಿಸಿದರು. ಅವರು 5ನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ತೊಡಗಿದ್ದರು. ತಿರುಮಲ ತಿರುಪತಿ ದೇವಸ್ಥಾನದ ‘ಆಸ್ಥಾನ ನರ್ತಕಿ’ ಎಂಬ ಗೌರವವನ್ನು ಹೊಂದಿದ್ದಾರೆ ಮತ್ತು ಅವರನ್ನು ಕೂಚಿ ಪುಡಿ ನೃತ್ಯದ ‘ಪಂಜುಧಾರಿ’ ಎಂದು ಕರೆಯುತ್ತಾರೆ. ‘ಯಾಮಿನಿ ಸ್ಕೂಲ್ ಆಫ್ ಡ್ಯಾನ್ಸ್’ ದೆಹಲಿಯ ಹೌಸ್ ಕಾಸ್ನಲ್ಲಿ ಅವರು ಸ್ಥಾಪಿಸಿದರು. ಅಲ್ಲಿ ಕಿರಿಯ ನೃತ್ಯಗಾರರಿಗೆ ನೃತ್ಯ ಪಾಠಗಳನ್ನು ಮಾಡುತ್ತಿದ್ದರು. ‘ಏ ಫ್ಯಾಷನ್ ಫೋರ್ ಡ್ಯಾನ್ಸ್’ ಅವರ ಆತ್ಮ ಚರಿತ್ರೆಯಾಗಿದೆ. ನೃತ್ಯದಲ್ಲಿ ಅವರು ಮಾಡಿದ ಸಾಧನೆಯ ಫಲವಾಗಿ ಅವರಿಗೆ ಹಲವಾರು ಪ್ರಶಸ್ತಿಗಳು ದೊರಕಿದೆ. 1968 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2001 ರಲ್ಲಿ ಪದ್ಮಭೂಷಣ ಪ್ರಶಸ್ತಿ, 2016 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಈ ಮೂರು ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಸರಕಾರವು ಅವರನ್ನು ಗೌರವಿಸಿದೆ. 1977 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 8 ಮಾರ್ಚ್ 2014 ರಂದು ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ‘ನಾಯಾಕಾ ಎಕ್ಸಲೆನ್ಸ್ ಪರ್ಸನಿ ಫೈಡ್’ ನಲ್ಲಿ ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸಿನಿಂದ ‘ನಾಟ್ಯಶಾಸ್ತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎರಡು ಭಾರತೀಯ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯ ಮತ್ತು ಕೂಚುಪುಡಿಗಳಲ್ಲಿ ಅಪಾರ ಸಾಧನೆಗಳನ್ನು ಅವರು ಮಾಡಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯಗಳನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಅವರದು ಬಹುಮುಖ್ಯ ಪಾತ್ರ.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.