• 19 ಜನವರಿ 2025

“ಕಡ್ಲೆದ ಒಟ್ಟುಗು ಎಣ್ಮೆಲ ಕರೆಂಚಿಂಡ್ “,”ಕೊಂದ ಪಾಪ ತಿಂದು ಪರಿಹಾರವೇ?

 “ಕಡ್ಲೆದ ಒಟ್ಟುಗು ಎಣ್ಮೆಲ ಕರೆಂಚಿಂಡ್ “,”ಕೊಂದ ಪಾಪ ತಿಂದು ಪರಿಹಾರವೇ?
Digiqole Ad

“ಕಡ್ಲೆದ ಒಟ್ಟುಗು ಎಣ್ಮೆಲ ಕರೆಂಚಿಂಡ್ “,”ಕೊಂದ ಪಾಪ ತಿಂದು ಪರಿಹಾರವೇ?

ತುಳುವಿನಲ್ಲಿ ಒಂದು ಮಾತು ಇದೆ.. “ಕಡ್ಲೆದ ಒಟ್ಟುಗು ಎಣ್ಮೆಲ ಕರೆಂಚಿಂಡ್ “ (ಕಡ್ಲೆಯೊಂದಿಗೆ ಎಳ್ಳು ಕರಟಿತು ).

  ನಾವು ಮಾಡುವ ಪಾಪ ಕರ್ಮಗಳು ಒಂದಲ್ಲ ಒಂದು ದಿನ ಇಡೀ ಊರನ್ನೇ ಸುಟ್ಟು ಬಿಡುತ್ತದೆ.. ಇದರಲ್ಲಿ ಅತೀಯಾದ ಪ್ರಾಣಿ ಹಿಂಸೆಯೂ ಒಂದು.. ಪ್ರಾಣಿಯನ್ನು ಕೊಂದರೆ ಯಾವ ಪಾಪ ದೋಷನು ಬರಲ್ಲ. ಅದು ಮೂಡನಂಬಿಕೆ ಎಂದು ಗೇಲಿ ಮಾಡಿ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡಿ ಕೊಂದವರು ಇದ್ದಾರೆ.. ಆದರೆ ಹನಿ ಹನಿ ನೀರು ಸೇರಿ ಕೊಡ ತುಂಬಿದಂತ್ತೆ.. ತಾನು ಮಾಡಿದ ಕರ್ಮಕ್ಕೆ ಪಾಪದ ಕೊಡ ತುಂಬಿ ಬರಲೇ ಬೇಕು… ಸಣ್ಣ ಮುಗ್ದ ನಾಯಿ ಮರಿಯನ್ನು. ಹೊಡೆದು ಬಿಸಾಡಿ ತುಳಿದು ಕೊಂದು ವಿಕೃತ ಆನಂದ ಪಟ್ಟವರು ಎಷ್ಟೋ ಮಂದಿ ಇದ್ದಾರೆ.. ಅವರಿಗೇನು ಗೊತ್ತು. ಆ ನಾಯಿ ಮರಿಯ ಕಣ್ಣೀರಿನ ಶಾಪ ನಾಳೆ ಬರುತ್ತದೆ ಎಂದು…

ಧರಣಿ ಮಂಡಲ ಹಾಡು ಹಾಡುವಾಗ ,ಕೇಳುವಾಗ ಗೋವಿನ ಸಂಕಟವನ್ನು ಕೇಳಿ ನಾವು ಕಣ್ಣೀರು ಹಾಕಿದವರು.. ಅದು ಕವಿ ಕಲ್ಪನೆಯಾದರೂ ನೈಜವಾಗಿ ಇದ್ದಂತೆ ಇದೆ.. ಅದೇ ನಿಜವಾದ ಗೋವು ,ಕರು , ಎಮ್ಮೆ, ಕೋಣಗಳನ್ನು ವಿಕೃತವಾಗಿ ಕೊಂದವರು ಎಷ್ಟೋ ಜನ ಇದ್ದಾರೆ.. ಆ ಗೋವು ಕರುಗಳ ಕಣ್ಣೀರು ಸಾಕಲ್ಲವೇ .. ಕೆಲವರಲ್ಲಿ ಒಂದು ತಪ್ಪು ಕಲ್ಪನೆ ಇದೆ. “ಕೊಂದ ಪಾಪ ತಿಂದು ಪರಿಹಾರ” ಇದರ ಅರ್ಥ ತಿಳಿಯದೆ. ಕೊಂದು ತಿಂದರೆ ಪಾಪ ಇಲ್ಲ ಎಂದು ತಿಳಿದುಕೊಂಡಿದ್ದಾರೆ.. ಆದರೆ ನಿಜವಾದ ಅರ್ಥದಲ್ಲಿ. ಕೊಂದ ಪಾಪವನ್ನು ಅನುಭವಿಸಿ ಪರಿಹಾರ , ಜೀವನದಲ್ಲಿ ನರಕ ರೋಗದಿಂದ ಬಳಲಿ .. ತಾನು ಮಾಡಿದ ಅನ್ಯಾಯದ ಬಗ್ಗೆ ಯೋಚಿಸಿ ಪಶ್ಚಾತ್ತಾಪ ಪಡುತ್ತಾ ಕೊರಗಿ ಸಾಯುವಲ್ಲಿವರೆಗೆ ಪಾಪ ಬೆನ್ನು ಬಿಡದು.. 

ಕಾಡಿನ ಪ್ರಾಣಿಗಳನ್ನು ಕೂಡ ಬೇಟೆಯಾಡಿ ಕೊಲ್ಲೊದು, ವಿಷ ಉಣಿಸಿ ಸಾಯಿಸೊದು, ಸಿಡಿ ಮದ್ದು ಇಟ್ಟು ಕೊಲ್ಲೊದು, ಹೀಗೆ ಹಲವು ರೀತಿಯಲ್ಲಿ ಪ್ರಾಣಿಗಳ ವಧೆ.. ಹೊರ ದೇಶದಲ್ಲಿ ಆಹಾರಕ್ಕಾಗಿ ಗೋಹತ್ಯೆ ಮಾಡುತ್ತಾರೆ ಹಾಗಂತ ಇಲ್ಲಿ ಅವರಿಗಿಂತ ಮೇಲುಗೈ ಸಾಧಿಸಿ ಕಂಡ ಕಂಡಲ್ಲಿ ಗೋಹತ್ಯೆ ಮಾಡಿ ವಿಜ್ರಂಭಿಸಿದವರು ಇದ್ದಾರೆ.. ಯಾವ ನೆಲದಲ್ಲಿ ಗೋವನ್ನು ಅಥವ ಇನ್ನಿತರ ಪ್ರಾಣಿಗಳನ್ನು ಪೂಜೆ ಮಾಡುತ್ತಾರೊ ಆ ಪುಣ್ಯ ನೆಲದಲ್ಲಿ ಅಂತಹ ಪ್ರಾಣಿಗಳನ್ನು ಕೊಲ್ಲಬಾರದು ಎಂದು ಹಿರಿಯರು ಹೇಳುತ್ತಾರೆ.. ನಾವು ನಾಗಾರಾಧನೆ ಮಾಡುವರು .. ನಮ್ಮ ಊರಲ್ಲಿ (ತುಳುನಾಡು )ನಾಗರ ಹಾವನ್ನು ಕೊಂದರೆ ಪಾಪ..ದೋಷವು ಇದೆ.ಅದೇ ಹಾವನ್ನು ಬೇರೆ ದೇಶದಲ್ಲಿ ಆಹಾರಕ್ಕಾಗಿ ಕೊಲ್ಲುತ್ತಾರೆ .. ಅವರಂತ್ತೆ ನಾವು ಯಾಕೆ ಆಗಬೇಕು. ಅಲ್ಲವೇ. ನಮ್ಮ ದೇಶ ನಮ್ಮ ಸಂಸ್ಕೃತಿ ಅದು ನಮ್ಮದೇ..ಅದನ್ನು ಪಾಲಿಸುವುದು ನಮ್ಮ ಧರ್ಮ..

ನೂರು ವರುಷ ಇದ್ದ ಆಯುಷ್ಯ ಈಗ ಅರ್ವತ್ತಕ್ಕೆ ಮುಟ್ಟಿದರೂ. ನಮ್ಮ ದರ್ಪ ಅಹಂಕಾರ, ಅಮಾನವೀಯ ಸಂಸ್ಕಾರ , ಕರುಣೆ ಇರದ ಕಟುಕತನ , ಎಲ್ಲವೂ ಸೇರಿ ನಾವು ಚಿರಂಜೀವಿಗಳೆಂದು ಮೆರೆಯುತ್ತಿದ್ದೇವೆ…ಎಲ್ಲವೂ ಒಂದು ಶ್ವಾಸ ನಿಲ್ಲುವ ವರೆಗೂ ಮಾತ್ರ ಅಧಿಕಾರ, ಅಹಂಕಾರ, ಹಣ, ಅಂತಸ್ತು,..

ಹೀಗೆ ಪ್ರಾಣಿ ಹಿಂಸೆ, ಮಕ್ಕಳನ್ನು ಹೊಡೆದು ಬಡಿದು ಕೊಲ್ಲೊ ಈ ಸಮಾಜಕ್ಕೆ. ಎಲ್ಲದರ ನೋವಿನ ಕಣ್ಣೀರ ಶಾಪ ತಟ್ಟಿ ಒಂದು ದಿನ ಊರಿಗೆ ಊರೇ ಪ್ರಕೃತಿ ವಿಕೋಪದ ಹೆಸರಲ್ಲಿ ನಾಶವಾಗಿ ಬಿಡುತ್ತದೆ.. ಇದರಲ್ಲಿ ಪಾಪ ಮಾಡಿದವನೂ ಧರ್ಮ ಮಾಡಿವನೂ ಎಲ್ಲರನ್ನು ಕೊಚ್ಚಿಕೊಂಡು ಹೋಗಬಹುದು..

              -ಲೇಖನ: ಎಂ ರಾಮ ಈಶ್ವರಮಂಗಲ,

(ಖ್ಯಾತ ನಾಟಕ ನಿರ್ದೇಶಕ,ರಂಗ ಚಾಣಕ್ಯ ಬಿರುದಾಂಕಿತ)

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ