ಇಂದು ವಿಶ್ವ ಚಾಕೊಲೇಟ್ ದಿನ.
ಇಂದು ವಿಶ್ವ ಚಾಕೊಲೇಟ್ ದಿನ.
ಚಾಕೊಲೇಟ್ ಇಷ್ಟಪಡದವರು ಯಾರಿದ್ದಾರೆ ಹೇಳಿ? ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಚಾಕ್ಲೇಟ್ ಪ್ರೇಮಿಗಳಿದ್ದಾರೆ. ಚಾಕೊಲೇಟಿಗೂ ಕೂಡ ಒಂದು ದಿನ ಇದೆ. ಪ್ರತಿ ವರ್ಷ ಜುಲೈ 7 ರಂದು ಪ್ರಪಂಚದಾದ್ಯಂತ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ಜುಲೈ 7 2009 ರಂದು ಮೊದಲು ವಿಶ್ವ ಚಾಕ್ಲೆಟ್ ದಿನವನ್ನು ಆಚರಿಸಲಾಯಿತು. 1550ರಲ್ಲಿ ಯುರೋಪಿಗೆ ಚಾಕೊಲೇಟ್ ಪರಿಚಯಿಸಿದ ನೆನಪಿನಲ್ಲಿ ವಿಶ್ವ ಚಾಕಲೇಟ್ ದಿನಾಚರಣೆ ಆರಂಭವಾಯಿತು. ಥಿಯೋಬ್ರೋಮಾ ಕೋಕೋ ಮರದ ಬೀಜಗಳಿಂದ ಚಾಕಲೇಟ್ ತಯಾರಿಸಲಾಯಿತು. ಈ ಮರಗಳು ಹೆಚ್ಚಾಗಿ ಮೆಕ್ಸಿಕೋ, ಉತ್ತರ ಅಮೆರಿಕ, ದಕ್ಷಿಣ ಅಮೇರಿಕಾ ಭಾಗಗಳಲ್ಲಿ ಕಂಡು ಬರುತ್ತದೆ. ಇದು ಕಹಿ ರುಚಿ ಹೊಂದಿರುತ್ತದೆ. ಪರಿಮಳ ಹೊಂದಿರುತ್ತದೆ. ಮತ್ತೆ ಅದಕ್ಕೆ ಸಿಹಿಯನ್ನು ಸೇರಿಸಲಾಗುತ್ತದೆ. ಆರಂಭದಲ್ಲಿ ಚಾಕ್ಲೇಟ್ ಗಳು ಪಾನಿಯ ರೂಪದಲ್ಲಿತ್ತು. ಕ್ರಿಸ್ತಶಕ 1800ರ ಬಳಿಕ ಈಗ ಕಾಣ ಸಿಗುವ ಚಾಕೊಲೇಟ್ ರೂಪ ಪಡೆಯಿತು.
ವಿಶ್ವ ಚಾಕ್ಲೆಟ್ ದಿನವು ಮಹತ್ವದ ಅರ್ಥವನ್ನು ಹೊಂದಿದೆ. ಇದು ಕೇವಲ ತಿನಿಸು ಎಂದು ಭಾವಿಸಲಾಗಿಲ್ಲ. ಇದು ಪ್ರೀತಿ, ಸ್ನೇಹ, ಸಂತೋಷದ ಸಂಕೇತವಾಗಿದೆ. ಪ್ರೇಮಿಯ ಮನವೊಲಿಸಲು, ಮಕ್ಕಳು ಅತ್ತಾಗ ಅವರ ಅಳು ನಿಲ್ಲಿಸಲು, ಸ್ನೇಹಿತರಿಗೆ ಗಿಫ್ಟ್ ಕೊಡಲು, ಮೆಚ್ಚುಗೆ- ಅಭಿನಂದನೆ ವ್ಯಕ್ತಪಡಿಸಲು ಹೀಗೆ ನಾನಾ ಸಂದರ್ಭಗಳಲ್ಲಿ ಚಾಕೊಲೇಟ್‌ಗಳನ್ನು ಬಳಸಲಾಗುತ್ತದೆ. ಚಾಕೊಲೇಟ್ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು. ಡಾರ್ಕ್ ಚಾಕೊಲೇಟ್ ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ, ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಡಾರ್ಕ್ ಚಾಕೊಲೇಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅತಿಯಾಗಿ ಚಾಕೊಲೇಟ್ ತಿನ್ನುವುದು ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ಲಿಮಿಟ್ ನಲ್ಲಿ ತಿನ್ನಬೇಕು.
ಬರಹ: ಶೇಖರ. ಎಂ ದೇಲಂಪಾಡಿ
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.