ಇಂದು ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’. ಬರಹ: ಶೇಖರ. ಎಂ ದೇಲಂಪಾಡಿ.
ಇಂದು ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’. ಬರಹ: ಶೇಖರ. ಎಂ ದೇಲಂಪಾಡಿ.
‘ಪುಸ್ತಕವಿಲ್ಲದ ಮನೆ ಜೀವವಿಲ್ಲದ ದೇಹ ಎರಡೂ ಒಂದೇ’ ಎಂಬ ಮಾತಿದೆ. ‘ದೇಶ ಸುತ್ತು ಕೋಶ ಓದು’ ಎಂಬ ಇನ್ನೊಂದು ಹಿರಿಯರ ಮಾತಿದೆ. ಈ ಎರಡೂ ಮಾತುಗಳಲ್ಲಿಯು ಪುಸ್ತಕದ ಮಹತ್ವದ ಬಗ್ಗೆ ಅರ್ಥವಿದೆ. ಈ ಜಗತ್ತಿನಲ್ಲಿ ಅದೆಷ್ಟೋ ಪುಸ್ತಕ ಪ್ರೇಮಿಗಳಿದ್ದಾರೆ. ಪುಸ್ತಕಗಳನ್ನು ಇಷ್ಟಪಡುವ ಎಲ್ಲರಿಗೂ ಒಂದು ದಿನವಿದೆ. ಹೌದು ಪ್ರತಿವರ್ಷ ಆಗಸ್ಟ್ 9 ರಂದು ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’ ವನ್ನು ಆಚರಿಸಲಾಗುತ್ತದೆ. ಪುಸ್ತಕಗಳನ್ನು ಓದುವ, ಬರೆಯುವ, ಸಂಗ್ರಹಿಸುವಂತಹ ಪುಸ್ತಕ ಪ್ರೇಮಿಗಳಿಗೆ ಈ ದಿನವನ್ನು ಮೀಸಲಿಡಲಾಗಿದೆ. ಇದು ಆಧುನಿಕ ಯುಗ, ಇಲ್ಲಿ ಪುಸ್ತಕಗಳನ್ನು ಬಳಸುವವರು ಅತಿ ಕಡಿಮೆ. ಎಲ್ಲರೂ ಮೊಬೈಲ್,ಲ್ಯಾಪ್ಟಾಪ್ ಹೀಗೆ ಹೊಸ ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಅದರ ಮಧ್ಯೆಯು ಕೆಲವು ಪುಸ್ತಕ ಪ್ರೇಮಿಗಳಿದ್ದಾರೆ. ಅವರಿಗಾಗಿ ಈ ದಿನವನ್ನು ಅರ್ಪಣೆ ಮಾಡಲಾಗಿದೆ. ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತಿ, ಮೆಚ್ಚುಗೆಯನ್ನು ಹೊಂದಿರುವ, ಸಂಗ್ರಹಿಸುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಹಲವು ಜನರಿದ್ದಾರೆ. ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ. ಆದುದರಿಂದ ಪುಸ್ತಕಗಳು ಕೂಡ ನಮ್ಮ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪುಸ್ತಕಗಳನ್ನು ಓದುವ, ಬರೆಯುವ, ಸಂಗ್ರಹಿಸುವ ಹವ್ಯಾಸಗಳನ್ನು ಇಟ್ಟು ಕೊಳ್ಳುವುದು ಉತ್ತಮ.
ಮೊದ ಮೊದಲಿನ ಪುಸ್ತಕಗಳ ಪುಟಗಳಿಗೆ ಚರ್ಮ ಕಾಗದಗಳನ್ನು ಬಳಸುತ್ತಿದ್ದರು, ಪುಸ್ತಕದ ಕವರ್ ಗಳನ್ನು ಮರದಿಂದ ಮಾಡುತ್ತಿದ್ದರು, ಹೆಚ್ಚಾಗಿ ಚರ್ಮದಿಂದ ಮುಚ್ಚುತ್ತಿದ್ದರು. ಸಾರ್ವಜನಿಕ ಗ್ರಂಥಾಲಯಗಳು ಮಧ್ಯಯುಗದಲ್ಲಿ ಆರಂಭವಾಯಿತು. ಕಾಲ ಬದಲಾದಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಪ್ರಿಂಟ್ ಮೀಡಿಯಾದಲ್ಲಿ ಕಂಡು ಹಿಡಿದರು. ಇಂದು ಪುಸ್ತಕ ತಯಾರಕರು ಡಿಜಿಟಲ್ ಮುದ್ರಣವನ್ನು ಬಳುಸುತ್ತಾರೆ. ಇದರ ಮೂಲಕ ಪ್ರಿಂಟ್, ಆನ್ ಡಿಮ್ಯಾಂಡ್ ಪ್ರಕಾಶನದ ಹೊಸ ಕ್ಷೇತ್ರವನ್ನು ತೆರೆಯುತ್ತಿದೆ. ಇಂದು ಹೆಚ್ಚಿನ ಜನರು ಇ-ಪುಸ್ತಕ (ಇಲೆಕ್ಟ್ರಾನಿಕ್ ಪುಸ್ತಕ )ವನ್ನು ಓದುತ್ತಾರೆ. ಅವುಗಳು ಅಂತರ್ಜಾಲದ ಮೂಲಕ ಲಭ್ಯವಿದೆ.ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿದಷ್ಟು ನಾವು ಬುದ್ಧಿಹೀನರಾಗಿ ಬಿಡುತ್ತೇವೆ, ಅದೇ ಪುಸ್ತಕವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿದಷ್ಟು ನಾವು ಬುದ್ಧಿವಂತರಾಗುತ್ತೇವೆ. ಆದುದರಿಂದ ಪುಸ್ತಕಗಳನ್ನು ನಮ್ಮ ಮಿತ್ರರಂತೆ ಕಾಣಬೇಕು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.