• 17 ಫೆಬ್ರವರಿ 2025

ಜಾತಿ ತಾರತಮ್ಯದೊಂದಿಗೆ ನುಡಿ ಸಮರ: ಪರಿಮಳ ಐವರ್ನಾಡು

 ಜಾತಿ ತಾರತಮ್ಯದೊಂದಿಗೆ ನುಡಿ ಸಮರ: ಪರಿಮಳ ಐವರ್ನಾಡು
Digiqole Ad

ಜಾತಿ ತಾರತಮ್ಯದೊಂದಿಗೆ ನುಡಿ ಸಮರ: ಪರಿಮಳ ಐವರ್ನಾಡು

ಎತ್ತ ಸಾಗುತ್ತಿದೆ ಸಮಾಜ? ಅಧಿಕಾರದ ಮದವೋ? ಅಥವಾ ಜಾತೀಯತೆಯ ದುರಹಂಕಾರವೋ? ಹುಟ್ಟು ಸಾವುಗಳ ನಡುವೆ ಇರುವ ಅತ್ಯಲ್ಪ ಜೀವಿತಾವಧಿಯಲ್ಲಿ ನಾನು ನಾನೆಂಬ ಅಹಂಕಾರಾವೇಕೆ?

ಹಿಂದಿನ ಕಾಲದಲ್ಲಿ ಕೆಲವೊಂದು ಅವಿದ್ಯಾವಂತ ಹಿರಿಯರ ಅಜ್ಞಾನದಿಂದ ಜಾತಿತಾರತಮ್ಯ ಗರಿಬಿಚ್ಚಿ ನಲಿದಿತ್ತು. ಕಾಲಕ್ರಮೇಣ ಎಲ್ಲವೂ ಮಾಯವಾಗಿ ಸಮಾಜದಲ್ಲಿ ಎಲ್ಲರೂ ಸಮಾನತೆಯ ಭಾವದಿಂದ, ಸಹೋದರತೆಯಿಂದ ಜೀವಿಸುತಿದ್ದರು.. ಶಾಂತಿ ನೆಲೆಸಿತ್ತು ಆದರೆ ಬಹಳ ನೋವಿನ ಸಂಗತಿಯೇನೆಂದರೆ ಈಗ ವಿದ್ಯಾವಂತರೇ ಜಾತೀಯತೆಯ ವಿಶಪಾಷಾಣವನ್ನು ತನ್ನ ನರಿಬುದ್ಧಿ ಉಪಯೋಗಿಸಿ ಸಮಾಜದಲ್ಲಿ ಕೆಲವು ಮುಗ್ಧರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ ಇದೀಗ ಸ್ವಲ್ಪ ಸ್ವಲ್ಪವೇ ಸಮಾಜದ ಶಾಂತಿ ಕದಡುತ್ತಿದೆ ಇಂತಹ ದುಷ್ಟ ಕ್ರಿಮಿಗಳಿಗೆ ಧಿಕ್ಕಾರವಿರಲಿ. ನಮ್ಮ ಈ ದುರ್ಬುದ್ಧಿಗೆ ಪ್ರಕೃತಿ ಶಾಸ್ತಿ ಮಾಡುತ್ತಿದೆ. ಜಲಪ್ರಳಯ, ಭೂಕಂಪ, ಸುನಾಮಿ ಮುಂತಾದ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅದೆಷ್ಟೋ ಜೀವಗಳು ಬಂದು ಬಳಗ, ಮನೆ ಮಠಗಳನ್ನು ಕಳೆದುಕೊಂಡು ಅನಾಥರಾಗಿ ಬೀದಿಗೆ ಬರುತಿದ್ದಾರೆ.ಎಷ್ಟೋ ಜನ ಧನಿಕ ವರ್ಗದವರು ಕಷ್ಟಪಡುತಿದ್ದಾರೆ. ಈಗ ಎಲ್ಲರೂ ಒಂದೇ ಸೂರಿನಡಿ ಜಾತಿ ಧರ್ಮಗಳನ್ನು ಮರೆತು ಒಟ್ಟಾಗಿ ಜೀವಿಸುತ್ತಿದ್ದಾರೆ.

ತಮಗೆ ಕಷ್ಟಕಾಲ ಬಂದಾಗ ಯಾವ ಜಾತಿವಾದವೂ ಸಹಾಯ ಮಾಡುವುದಿಲ್ಲ ಮಾನವೀಯತೆವುಳ್ಳ ಒಳ್ಳೆಯ ಮನಸ್ಸುಗಳು ಮಾತ್ರ ಸಹಾಯ ಮಾಡುತ್ತವೆ.

            ಆದುದರಿಂದ ಬಂಧುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಜಾತಿತಾರತಮ್ಯದ ವಿಷಬೀಜ ಬಿತ್ತನೆಯಿಂದ ಮಹಾಸಮರಕ್ಕೆ ಕಾರಣವಾಗುತ್ತದೆ. ಸಮಾಜದಲ್ಲಿ ಶಾಂತಿ ಕದಡುತ್ತದೆ. ಮುಂದಿನ ಪೀಳಿಗೆ ತಪ್ಪು ಹೆಜ್ಜೆಯತ್ತ ಸಾಗುತ್ತದೆ ಇದನ್ನು ತಪ್ಪಿಸಬೇಕಾದರೆ ಬ್ರಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳೋಣ, ಸಾಮರಸ್ಯದ ಜೀವನ ನಡೆಸೋಣ ಜಾತಿವಿಷ ವರ್ತುಲದಿಂದ ಮುಕ್ತಿಹೊಂದೋಣ. ಮೊದಲು ಮಾನವರಾಗೋಣ, ಮನುಷ್ಯತ್ವ ಬೆಳೆಸಿಕೊಳ್ಳೋಣ, ಜಾತಿ ಮತ ಧರ್ಮ ಬೇಧ ಎಂಬ ಗುಲಾಮಗಿರಿಯಿಂದ ಮುಕ್ತರಾಗಿ ಸಂಪೂರ್ಣ ಸ್ವಾತಂತ್ರ್ಯಗಳಿಸೋಣ 

ಜೈ ಹಿಂದ್

✍️ಪರಿಮಳ ಐವರ್ನಾಡು ಸುಳ್ಯ

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ