• 7 ಡಿಸೆಂಬರ್ 2024

16 ಬೋರ್ವೆಲ್ ಪಂಪು ಕಳವು ಪ್ರಕರಣ: ಆರೋಪಿಯ ಬಂಧನ.

 16 ಬೋರ್ವೆಲ್ ಪಂಪು ಕಳವು ಪ್ರಕರಣ: ಆರೋಪಿಯ ಬಂಧನ.
Digiqole Ad

16 ಬೋರ್ವೆಲ್ ಪಂಪು ಕಳವು ಪ್ರಕರಣ: ಆರೋಪಿಯ ಬಂಧನ.

ವಿಟ್ಲ: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್ ಗೌಡ ಎಂಬವರ ಮನೆಯ ಬಳಿಯ ಕಟ್ಟಡದಲ್ಲಿ ದುರಸ್ತಿಗಾಗಿ ಇರಿಸಿದ್ದ 16 ಬೋರ್ವೆಲ್ ಪಂಪುಗಳು ಜುಲೈ 21 ರಂದು ರಾತ್ರಿ ಕಳ್ಳತನವಾಗಿತ್ತು, ವಿಟ್ಲ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇದೀಗ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಂದಾಜು 1 ಲಕ್ಷ 81 ಸಾವಿರ ರೂ. ಮೌಲ್ಯದ ಬೋರ್ವೆಲ್ ಪಂಪುಗಳು ಕಳ್ಳತನವಾಗಿದ್ದವು. ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇದರ ಅನ್ವಯ ಪೋಲಿಸರು ಆರೋಪಿಗಾಗಿ ವಿಶೇಷ ತಂಡ ರಚಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಪೋಲಿಸರ ವಿಶೇಷ ತಂಡವು ಕಡಬ ತಾಲೂಕಿನ ಪೆರಬೆ, ಕೋಚಕಟ್ಟಿ ನಿವಾಸಿ ಆರೋಪಿ ಮಹಮ್ಮದ್ ಶಾಕೀರ್ ನನ್ನು ಬಂಧಿಸಿದ್ದಾರೆ. ಕಳವಿಗೆ ಉಪಯೋಗಿಸಿದ 2 ಲಕ್ಷ ರೂ. ಮೌಲ್ಯದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಯ ಪತ್ತೆಯ ಕಾರ್ಯಚರಣೆಯಲ್ಲಿ ಬಂಟ್ವಾಳ ಉಪ ವಿಭಾಗದ ಪೋಲಿಸ್ ಉಪಾಧೀಕ್ಷಕ ಎಸ್ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೋಲಿಸ್ ಠಾಣಾ ನಿರೀಕ್ಷಕ ನಾಗರಾಜ್ ಅವರ ನಿರ್ದೇಶನದಂತೆ ವಿಟ್ಲ ಪೋಲಿಸರು ಬಂಧಿಸಿದ್ದಾರೆ.

ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

 

Digiqole Ad

ಈ ಸುದ್ದಿಗಳನ್ನೂ ಓದಿ