• 3 ನವೆಂಬರ್ 2024

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

 ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.
Digiqole Ad

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಯಲ್ಲಿ 78ನೇ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರರವರು ದ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರು , ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ , ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಸ್. ಜಿ.ಕೃಷ್ಣ, ಶ್ರೀ ಹರೀಶ್ ಪುತ್ತೂರಾಯ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ. ಎನ್. ಉಪಸ್ಥಿತರಿದ್ದರು. ತದನಂತರ ಸಭಾಕಾರ್ಯಕ್ರಮದಲ್ಲಿ ಶಾಲಾಧ್ಯಕ್ಷರು ಮಾತನಾಡುತ್ತಾ ಸ್ವಾತಂತ್ರ್ಯ ಎಂಬುದು ಜವಾಬ್ದಾರಿ ಇದ್ದಾಗ ಮಾತ್ರ ಅನ್ವಯವಾಗುತ್ತದೆ. ಸ್ವಾತಂತ್ರ್ಯ ನಂತರ ಎಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದೇವೆ ಎನ್ನುವುದು ಮುಖ್ಯ. ನಮ್ಮ ಸಂಪಾದನೆ ನಮ್ಮ ಗೌರವ ವಾಗಬೇಕೆ ಹೊರತು ದರ್ಮಕ್ಕೆ ಸಿಗುವಂತದ್ದು ಬೇಡ. ಇಂದಿನ ಅಭಿವೃದ್ಧಿಯ ಚುಕ್ಕಾಣಿ ಹಿಡಿದ ಮೋದಿಜಿಯವರ ಹಣ ರಹಿತ ವ್ಯವಹಾರವನ್ನು ಶ್ಲಾಘಿಸಿ ಸ್ವಾತಂತ್ರ್ಯ ದಿವಸದ ಶುಭಾಶಯ ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೀಶ್ ಪುತ್ತೂರಾಯರು ಮಾತನಾಡಿ ಇಂದಿನ ಮಕ್ಕಳಲ್ಲಿ ಸ್ವಾತಂತ್ರ್ಯ ಎಂಬುದರ ಬಗೆಗಿನ ಅರ್ಥ ಮತ್ತು ಅದರಲ್ಲಿ ಹೋರಾಡಿದವರ ಬಗ್ಗೆ ನಿಜವಾದ ಅರಿವು ಮೂಡಿ ಮಾತನಾಡಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಮಾತನಾಡಿ ಭಾರತ ಎಂಬ ಶಬ್ದ ಸ್ವತಂತ್ರ ನಂತರ ಬಂದದ್ದಲ್ಲ ಅದು ಸ್ವತಂತ್ರ ಪೂರ್ವ ಪುರಾಣಗಳಲ್ಲೇ ಇದ್ದು ಅದರ ಧ್ವಜವೂ ಆಗಿನ ಸಂದರ್ಭ ದಲ್ಲಿಯೇ ಇದ್ದೂ ಕೃಷ್ಣನೇ ದ್ವಜವನ್ನು ಹಿಡಿದದ್ದು ಮಹಾಭಾರತದಲ್ಲಿ ಕಾಣಬಹುದು ಎಂದರು.

ಈ ಸುದ್ದಿಯನ್ನು ಓದಿದ್ದೀರಾ.?ಮಿಲಿಟರಿ ಸಮವಸ್ತ್ರದಲ್ಲಿ ವಯನಾಡಿಗೆ ಭೇಟಿ ಕೊಟ್ಟ ನಟ ಮೋಹನ್ ಲಾಲ್,3 ಕೋಟಿ ರೂ ನೆರವು

ಶಿಕ್ಷಕರಾದ ಶ್ರೀ ಹರೀಶ್ ಹಾಗೂ ಶ್ರೀಮತಿ ಪ್ರಶಾಂತಿ ಹಾಗೂ ವಿದ್ಯಾರ್ಥಿಗಳಾದ ಜ್ಞಾನ ರೈ, ವಿಧಾತ್ ರೈ, ಸರ್ವದ್ , ಅಕ್ಷರ ರವರು ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ದೇಶದ ಐತಿಹಾಸಿಕ ಘಟನೆಗಳನ್ನು ನೆನಪಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗೌರವಾನ್ವಿತ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ ಎನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಾಯಿ ಸಂಚಿತ್, ಪ್ರಥಮ್ ಪ್ರಾರ್ಥಿಸಿದರು. ಶಿಕ್ಷಕಿಯರಾದ ಶ್ರೀಮತಿ ಚೈತ್ರಾ ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಕನ್ಯಾ ರವರು ವಂದಿಸಿದರು.

ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ