ಮುಂಬೈ: ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಹಲ್ಲೆ – ಇಬ್ಬರು ವಶಕ್ಕೆ.
ಮುಂಬೈ: ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಹಲ್ಲೆ – ಇಬ್ಬರು ವಶಕ್ಕೆ.
ಮುಂಬೈ: ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆಯು ಮುಂಬೈನ ಸಾಯನ್ ಆಸ್ಪತ್ರೆಯಲ್ಲಿ ನಡೆದಿದೆ. ಅಪಘಾತ ಪ್ರಕರಣಗಳ ಚಿಕಿತ್ಸಾ ವಿಭಾಗದಲ್ಲಿದ್ದ ವೈದ್ಯೆಯ ಮೇಲೆ ಭಾನುವಾರ ಬೆಳಿಗ್ಗೆ ಹಲ್ಲೆ ನಡೆದಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಹಾರಾಷ್ಟ್ರ ವೈದ್ಯಕೀಯ ಸೇವೆ ಸಿಬ್ಬಂದಿ ಹಾಗೂ ವೈದ್ಯಕೀಯ ಸೇವೆ ಸಂಸ್ಥೆಗಳ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ರೋಗಿ ಜೊತೆ ಬಂದಿದ್ದವರು ಪಾನಮತ್ತರಾಗಿದ್ದರು. ವೈದ್ಯೆ ಜೊತೆ ಮಾತಿನ ಚಕಾಮಕಿ ನಡೆಸಿ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಇಬ್ಬರು ಮಹಿಳೆಯರು ಇದ್ದರು. ಹಲ್ಲೆ ಕೋರರಿಗೆ ಪ್ರತಿರೋಧ ತೋರವಾಗ ವೈದ್ಯ ಗಾಯಗೊಂಡಿದ್ದಾರೆ, ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.