• 7 ಡಿಸೆಂಬರ್ 2024

ರಕ್ಷಾ ಬಂಧನವು ಬಾಂಧವ್ಯ ಬೆಸೆಯುವ ಹಬ್ಬ.

 ರಕ್ಷಾ ಬಂಧನವು ಬಾಂಧವ್ಯ ಬೆಸೆಯುವ ಹಬ್ಬ.
Digiqole Ad

ರಕ್ಷಾ ಬಂಧನವು ಬಾಂಧವ್ಯ ಬೆಸೆಯುವ ಹಬ್ಬ.

ಬದಿಯಡ್ಕ: ‘ರಕ್ಷಾ ಬಂಧನವು ಸಾಹೋದರ್ಯ ಬೆಸೆಯುವ ಜತೆಗೆ ಸಮಾನತೆ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ. ಈ ಹಬ್ಬದಿಂದ ಮನಸುಗಳಲ್ಲಿ ಬಾಂಧವ್ಯ ಬೆಸೆಯುತ್ತದೆ’ ಎಂದು ಹಾಸನದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಸ್ಥಾಪಕಾಧ್ಯಕ್ಷೆ ಕಲಾವತಿ ಮಧುಸೂದನ ಹೇಳಿದರು. ಅವರು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಸೋಮವಾರ ನಡೆದ ರಕ್ಷಾ ಬಂಧನ ಹಾಗೂ ಸಂಸ್ಕೃತ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

‘ಮನೋವಿಕಾರಗಳನ್ನು ಅಳಿಸಿಕೊಂಡು, ಸಂಸ್ಕಾರ, ಸಂಸ್ಕೃತಿಯನ್ನು ವೃದ್ಧಿಗೊಳಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರಕುವಂತೆ ಮಾಡಬೇಕು’ ಎಂದು ಹೇಳಿದರು. ಸ್ಪಂದನ ಸಿರಿ ವೇದಿಕೆಯ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಯೋಜನೆಗಳ ಬಗ್ಗೆ ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಕೆ ವಾಮನ್ ರಾವ್ ಬೇಕಲ್ ಮಾತನಾಡಿ, ‘ಸಂಸ್ಕಾರದ ಅರಿವಿನಿಂದ ಜ್ಞಾನವು ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಮಾನವೀಯತೆಯನ್ನು ಅರಳಿಸಲು ಧಾರ್ಮಿಕ ಆಚರಣೆಗಳು ಅನುಷ್ಠಾನ ಆಗಬೇಕು’ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ಪಂಜಿತ್ತಡ್ಕ ಸತ್ಯ ನಾರಾಯಣ ಶರ್ಮ ಮಾತನಾಡಿ,’ರಕ್ಷೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ರಕ್ಷಣೆಯೆ ನಮಗೆ ಬಲವನ್ನು ನೀಡುತ್ತದೆ. ಅನ್ಯಾಯದ ವಿರುದ್ಧ ಹೋರಾಡಲು ಇದುವೇ ಶಕ್ತಿ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಕೃತ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಸಂಸ್ಕೃತ ಭಾಷಣ, ಗೀತೆ ಹಾಗೂ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕ ಜಯಪ್ರಕಾಶ ಪಜಿಲ, ಸಾಹಿತಿ ನರಸಿಂಹ ಭಟ್ ಏತಡ್ಕ, ಸಂಧ್ಯಾರಾಣಿ ಟೀಚರ್, ಶ್ರೀಲಕ್ಷ್ಮೀ ಇದ್ದರು. ಶಿಫಾಲಿ ರೈ ಸ್ವಾಗತಿಸಿದರು. ಅವನೀಶ್ ಶರ್ಮ ವಂದಿಸಿದರು. ನಿಹಾರಿಕ ನಿರೂಪಿಸಿದರು. ಮಕ್ಕಳೆಲ್ಲಾ ಪರಸ್ಪರ ರಕ್ಷೆಯನ್ನು ಕಟ್ಟಿ ಸಂಭ್ರಮಿಸಿದರು.

ರಕ್ಷಾಬಂಧನ ಪೌರಾಣಿಕ ಹಿನ್ನೆಲೆ‌ ಏನು ಗೊತ್ತಾ:
ಇದು ಪ್ರಸಿದ್ದಿ ಪಡೆದಿರುವುದು ಭಾತೃತ್ವದ ದ್ಯೋತಕವಾಗಿ ಬಂದ ಕಥೆ. ಒಮ್ಮೆ ಬಲಿಷ್ಠನಾಗಿದ್ದ ರಾಕ್ಷಸರ ರಾಜನಾದ ಬಲಿಚಕ್ರವರ್ತಿಗೆ ವಿಷ್ಣುವು ವರವನ್ನು ನೀಡಿದ ಅಂತೆ. ಅದು ಅವನನ್ನು ಅಜೇಯನನ್ನಾಗಿ ಮಾಡಿತು. ಯಾರೂ ಸೋಲಿಸದಂತಹ ಕಠಿಣ ವರವಾಯಿತಂತೆ.ಆದ್ರೆ ವಿಷ್ಣು ವರವನ್ನು ಕೊಟ್ಟರು ಕೂಡ ಭಯವಾಗಿದ್ದು ಲಕ್ಷ್ಮೀದೇವಿಗೆ. ವಿಷ್ಣುವಿನ ಪತ್ನಿಯಾದ ಲಕ್ಷ್ಮಿ ದೇವಿಯು ತನ್ನ ಪತಿಯನ್ನು ಮತ್ತು ಬ್ರಹ್ಮಾಂಡವನ್ನು ಬಲಿಯಿಂದ ರಕ್ಷಿಸಲು ಒಂದು ಉಪಾಯ ಮಾಡಿದಳು. ಲಕ್ಷ್ಮಿ ದೇವಿಯು ಬಲಿಯ ಮಣಿಕಟ್ಟಿನ ಸುತ್ತಲೂ ಪವಿತ್ರವಾದ ಸೂತ್ರವನ್ನು ಕಟ್ಟಿದಳು ಅಂತೆ. ಅಷ್ಟು ಮಾತ್ರವಲ್ಲ ಅವನನ್ನು ತನ್ನ ಸಹೋದರ ಎಂದು ಘೋಷಿಸಿದಳು ಕೂಡ.ಇದೊಂದು ಧಾರ್ಮಿಕ ವಿಚಾರವಾದರೆ

ಇನ್ನೊಂದು ಕಥೆ ಹೀಗೆ ಹೇಳುತ್ತೆ:
ರಾಜಸೂಯ ಯಾಗದ ಸಂದರ್ಭದಲ್ಲಿ ದುಷ್ಟನಾದ ಶಿಶುಪಾಲನ ಶಿರಚ್ಛೇದವನ್ನು ಮಾಡುವಾಗ ಶ್ರೀ ಕೃಷ್ಣನ ಬೆರಳಿಗೆ ಗಾಯವಾಗುತ್ತದೆ ಅಂತೆ. ಆಗ ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿ ರಕ್ತಸ್ರಾವವನ್ನು ತಡೆದಳು. ಕೃಷ್ಣನು ಅದಕ್ಕೆ ಪ್ರತಿಯಾಗಿ, ದ್ರೌಪದಿಯನ್ನು ಯಾವುದೇ ತೊಂದರೆಯಿಂದ ರಕ್ಷಿಸುವುದಾಗಿ ಭರವಸೆ ನೀಡಿದನು ಎನ್ನುವುದು ಧಾರ್ಮಿಕ ನಂಬಿಕೆ.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ