ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು ವಿವಿಯು ಮಂಗಳಗಂಗೋತ್ರಿ/ಘಟಕ ಕಾಲೇಜು, ವಿವಿ ಸಂಧ್ಯಾ ಕಾಲೇಜುಗಳ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಪೂರ್ಣ&ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸ್ನಾತಕೋತ್ತರ ಪದವಿಯಲ್ಲಿ 55% ಅಂಕ ಹೊಂದಿದ(SC/ST ಅಭ್ಯರ್ಥಿಗಳಿಗೆ 50%) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‌ನಲ್ಲಿ ಆ.26ರೊಳಗೆ ಸಲ್ಲಿಸಬೇಕು. SSLC, ಸ್ನಾತಕ, ಸ್ನಾತಕೋತ್ತರ ಅಂಕಪಟ್ಟಿ& ಪದವಿ ಅಂಕಪಟ್ಟಿ, ಪ್ರಮಾಣಪತ್ರ ಸಲ್ಲಿಸಬೇಕು. ಸಂದರ್ಶನದ ವೇಳೆ ಮೂಲ ದಾಖಲೆ ಕಡ್ಡಾಯವಾಗಿ ಹಾಜರುಪಡಿಸಬೇಕು.