• 2 ನವೆಂಬರ್ 2024

ಓದಿಲ್ಲ ಎಂದು ಅಮ್ಮ ಬೈದಿದ್ದಕ್ಕೆ ಮನೆ ಬಿಟ್ಟ ಬಾಲಕ.

 ಓದಿಲ್ಲ ಎಂದು ಅಮ್ಮ ಬೈದಿದ್ದಕ್ಕೆ ಮನೆ ಬಿಟ್ಟ ಬಾಲಕ.
Digiqole Ad

ಓದಿಲ್ಲ ಎಂದು ಅಮ್ಮ ಬೈದಿದ್ದಕ್ಕೆ ಮನೆ ಬಿಟ್ಟ ಬಾಲಕ.

ಬೆಂಗಳೂರು: ಸರಿಯಾಗಿ ಗಮನ ಕೊಟ್ಟು ಓದುತ್ತಿಲ್ಲ ಹೋಂ ವರ್ಕ್ ಮಾಡುತ್ತಿಲ್ಲ ಎಂದು ತಾಯಿ ಬೈದಿದ್ದಕ್ಕೆ ಮಗ ಮುನಿಸಿಕೊಂಡು ಮನೆ ಬಿಟ್ಟು ಹೋದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಜೈ ಮಾರುತಿ ನಗರದಲ್ಲಿ ನಿನ್ನೆ ನಡೆದಿದೆ. ದೇವರಾಜ್ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರ 8 ವರ್ಷದ ಮಿಥುನ್ ಮನೆ ಬಿಟ್ಟು ಹೋದ ಬಾಲಕ.
ಮಿಥುನ್ ಹೋಂ ವರ್ಕ್, ಕ್ಲಾಸ್ ವರ್ಕ್ ಮಾಡಿಲ್ಲ ಎಂದು ಅವನ ಸ್ಕೂಲ್ ಡೈರಿಯಲ್ಲಿ ಶಿಕ್ಷಕಿ ಬರೆದಿದ್ದರು. ಇದರಿಂದ ಅಸಮಾಧಾನಗೊಂಡ ಅಮ್ಮ, ಹೋಂ ವರ್ಕ್ ಮುಗಿಸಿ ಮಲಗುವಂತೆ ಮಗನಿಗೆ ಕಟ್ಟುನಿಟ್ಟಾಗಿ ಹೇಳಿದ್ದರು. ಇದರಿಂದ ಮನನೊಂದು ಮಿಥುನ್ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ನಿನ್ನೆ ಸಂಜೆ 6 ಗಂಟೆಗೆ ಈತ ಮನೆಬಿಟ್ಟು ತೆರಳಿದ್ದಾನೆ. ಶಾಲೆಯಿಂದ ಬಂದ ಕೂಡಲೇ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೊರಟು ಹೋಗಿದ್ದಾನೆ. ಬಾಲಕನಿಗಾಗಿ ಎಲ್ಲಾ ಕಡೆ ಹುಡುಕಿದ ಪೋಷಕರು ಬಳಿಕ ನಂದಿನಿ ಲೇಔಟ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ