• 7 ಡಿಸೆಂಬರ್ 2024

ಕಾಲ.. ಬದಲಾಗಿದೆಯಾ..?🤔

 ಕಾಲ.. ಬದಲಾಗಿದೆಯಾ..?🤔
Digiqole Ad

ಕಾಲ.. ಬದಲಾಗಿದೆಯಾ..?🤔

ಲೇಖಕರು: ಎಂ ರಾಮ ಈಶ್ವರಮಂಗಲ,
ಖ್ಯಾತ ನಾಟಕ ನಿರ್ದೇಶಕ,ರಂಗ ಚಾಣಕ್ಯ ಬಿರುದಾಂಕಿತ

ಹಿಂದೆ.. ಊರಲ್ಲಿ ಒಂದು ನಾಟಕ ಅಥವ ಯಕ್ಷಗಾನ ಕಲಾ ಪ್ರದರ್ಶನ ಆಗುತ್ತಿದ್ದಾಗ. ಊರ ಜನಗಲೆಲ್ಲ ಬಂದು.. ಬೆಳಗ್ಗಿನ ತನಕ ಆ ಪ್ರದರ್ಶನವನ್ನು ವೀಕ್ಷಿಸಿ..ತಮ್ಮ ದಣಿವು ಆಯಾಸ ನೋವು ಸಂಕಟವನೆಲ್ಲ ಮರೆತು ಬಿಡುತ್ತಿದ್ದರು..
ಅದರಲ್ಲಿ ಬರುವ ಹಾಸ್ಯ ಸನ್ನಿವೇಶಗಳು ಎಲ್ಲಿಯೂ ದ್ವಂದ್ವಾರ್ಥ, ಅಶ್ಲೀಲ, ನಿಂದಿಸುವ, ಸಂಭಾಷಣೆಗಳಿರದೆ ಕಲಾವಿದರ ಉತ್ತಮ ಮಾತಿನ ರಸದೌತಣವನ್ನು ಸವಿಯುತ್ತಿದ್ದರು..
ಆಗಿನ ಕಾಲದಲ್ಲಿ ವಿಧ್ಯೆ ಇಲ್ಲದವರು ಕೂಡ ಪೌರಾಣಿಕದ ಎಲ್ಲಾ ಕತೆಗಳನ್ನು ತಿಳಿದು ಕೊಂಡವರೇ ಜಾಸ್ತಿ ಇದ್ದರು.. ಮಹಾಭಾರತ , ರಾಮಾಯಣ, ಸತ್ಯಹರಿಶ್ಚಂದ್ರ, ನಳದಮಯಂತಿ, ಹೀಗೆ ಯಾವ ಕಥಾ ಭಾಗದ ಪ್ರಶ್ನೆ ಕೇಳಿದರು ತಟ್ಟನೆ ವಿವರಣೆ ನೀಡಿ ಉತ್ತರಿಸುತ್ತಿದ್ದರು.. ಅವರು ಅಕ್ಷರಾಭ್ಯಾಸ ಮಾಡದೆ ಶಾಲೆಯಲ್ಲಿ ಕಲಿಯದೆ ಇದ್ದರೂ.. ಪುರಾಣ ನೀತಿ ಕತೆಗಳನ್ನು ನಾಟಕ ಯಕ್ಷಗಾನ ನೋಡಿಯೆ ಕಲಿತವರು.. ಹಾಗು ಮನೆಯಲ್ಲಿ ಕೂಡ ಅಜ್ಜ ಅಜ್ಜಿಯರು ಮಕ್ಕಳಿಗೆ ಪುರಾಣ ಕಥೆಗಳನ್ನು ಹೇಳುತ್ತಿದ್ದರು.. ಆಗಿನ ಮನೋರಂಜನೆಗಾಗಿ ಇದ್ದುದು ಕತೆ ಪುರಾಣಗಳೆ‌‌..
ರೇಡಿಯೋ, ಆಡಿಯೋ ಕ್ಯಾಸೆಟ್‌ಗಳನ್ನು ಇಟ್ಟು ಕೇಳಿ ಆನಂದಿಸುತ್ತಿದ್ದರು..
ಸಮಯ ಕಳೆದಂತ್ತೆ ಟೀವಿ. ಸಿನಿಮಾದತ್ತ ಮುಖ ಮಾಡಿದರು.. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಚಿತ್ರಗಳನ್ನು ಥಿಯೇಟರ್‌ಗಳಲ್ಲಿ ನೋಡಿದರೆ ಟೀವಿಯಲ್ಲಿ ರಾಮಾಯಣ , ಮಹಾಭಾರತ, ಸತ್ಯಹರಿಶ್ಚಂದ್ರ, ಪರಮವೀರ ಚಕ್ರ , ಇಂತಹ ಒಳ್ಳೆಯ ಧಾರಾವಾಹಿಗಳನ್ನು ನೋಡುತ್ತಿದ್ದರು ..
ಕಾಲ ಕಳೆದಂತೆ.. ಆಟ ನಾಟಕಗಳಲ್ಲೂ ಸಂಭಾಷಣೆಯು ಬದಲು ಆಗಲಾರಂಭಿಸಿತು , ಸಿನಿಮಾ ‌ಧಾರಾವಾಹಿಗಳಲ್ಲಿ , ಕ್ರೌರ್ಯ, ಸೇಡು, ಅಶ್ಲೀಲ ತುಂಬಿದ ಕತೆಗಳೇ ತುಂಬಿ ಹೋದವು..
ಜನಗಳಲ್ಲಿ ಪುರಾಣ ಕತೆಗಳ ಆಸಕ್ತಿ ಸ್ವಲ್ಪ ಕಡಿಮೆ ಆಗ ತೊಡಗಿತು.. ಕಲಾ ಪ್ರದರ್ಶನಗಳು ಕಾಲಮಿತಿಯಾಯಿತು,
ಬರು ಬರುತ್ತಾ. ಈಗಿನ ಜನರಿಗೆ, ಕ್ರೌರ್ಯ, ಹೊಡೆದಾಟ, ಅಶ್ಲೀಲತೆ , ಡಬ್ಬಲ್ ಮೀನಿಂಗ್ ಇದ್ದರೆ. ಇದೇ ಮನೋರಂಜನೆ.. ಮನೋರಂಜನೆ ಅಂದರೆ. ಹೊಡೆ,ಬಡಿ,ಕೊಲ್ಲು ಇಷ್ಟೆ..
ಹೆಂಡ, ಡ್ರಗ್ಸ್, ರೌಡಿಸಂ, ಕೊಲೆ , ರೇಪ್, ಗಲಾಟೆ ಗದ್ದಲ, ಮೋಸ , ಹೀಗೆ ಒಂದೊಂದೇ ಮೈಗೂಡಿಸಿಕೊಂಡು ಬುದ್ಧಿ ಇಲ್ಲದ ಬುದ್ದಿವಂತರಾಗತೊಡಗಿದರು.. ಕೆಲವರು ರಾಜಕೀಯದ ಪ್ರಭಾವದಿಂದ ದುಷ್ಕೃತ್ಯಗಳಲ್ಲಿ ಮೆರೆದರೆ.. ಇನ್ನು ಕೆಲವರು ಅದೇ ಜೀವನ ಎಂದು ಕಳೆದರು..
ಈಗ ಯಾವುದೇ ಕಾರ್ಯಕ್ರಮಕ್ಕೆ ಹೋದರು ಒಂದು “ಕಿಕ್ಕ್ ” ಬೇಕು .. ಡಿ.ಜೆಗೆ ಕುಡಿದು ಕುಣಿಬೇಕು, ಮಾತಿಗೆ ಮಾತು ಬೆಳೆದು ಗಲಾಟೆ ನಡೆಯಬೇಕು.. ಇದೆಲ್ಲ. ಈಗಿನ ಮನೋರಂಜನೆಗಳು…
ಮನೆಯವರು ಸಾಲ ಮಾಡಿಯಾದರು ವಿದ್ಯೆ ಕಲಿಯಲಿ ಎಂದು ಹರಸಾಹಸ ಪಟ್ಟರೆ.. ಇವರು ಮಾತ್ರ ಯಾವುದೇ ಚಿಂತೆಯಿಲ್ಲದೆ ಅರೆಬರೆ ಬಟ್ಟೆಗಳು, ಫ್ಯಾಷನ್ ಬೈಕುಗಳು , ಮೋಜು ಮಸ್ತಿಗಳಲ್ಲೇ ಕಳೆದು ಬಿಡುತ್ತಾರೆ.. ಅಪ್ಪ ಅಮ್ಮ ಸ್ವಲ್ಪ ಬುದ್ಧಿ ಹೇಳತೊಡಗಿದರೆ.. ಸಾಯುವ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿ ಬಿಡುತ್ತಾರೆ.. ಕೋಟಿ ಕೊಟ್ಟು ವಿದ್ಯೆ ಕಲಿತರೂ. ಬುದ್ದಿ ಮಾತ್ರ ಇಲ್ಲ ..ಇವರಿಗಿಂತ ಹಿಂದಿನ ಅವಿದ್ಯಾವಂತರೇ ಮೇಲು.. ಅವರಲ್ಲಿ ಭಯ ಭಕ್ತಿ ನಯ ವಿನಯ ಎಲ್ಲವೂ ಇತ್ತು ಓದುವ ವಿದ್ಯೆಯನ್ನು ಒಂದು ಬಿಟ್ಟು..
ಕಾಲ ಬದಲಾಗಿದೆ ಎಂದು ಕೆಲವರು ಹೇಳಬಹುದು.. ಆದರೆ ಕಾಲ ಬದಲಾಗಲಿಲ್ಲ.. ಜನಗಳ ಮನೋಸ್ಥಿತಿ ಬದಲಾವಣೆ ಆಗಿದೆ.. ಸಂಸ್ಕಾರಗಳೂ ಬದಲಾಗಿದೆ, ಒಳ್ಳೆಯ ವಿಚಾರಗಳಲ್ಲಿ ಆಸಕ್ತಿ ಕಡಿಮೆಯಾಗಿದೆ, ನಂಬಿಕೆ ಎನ್ನುವ ಪದವೇ ಮಾಯವಾಗಿದೆ..

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

 

Digiqole Ad

ಈ ಸುದ್ದಿಗಳನ್ನೂ ಓದಿ