ಬಿಸ್ಕೆಟ್ ಕಾರ್ಖಾನೆಯಲ್ಲಿ ಯಂತ್ರದ ಬೆಲ್ಟ್ ಗೆ ಸಿಲುಕಿ ಮಗು ಸಾವು.
ಬಿಸ್ಕೆಟ್ ಕಾರ್ಖಾನೆಯಲ್ಲಿ ಯಂತ್ರದ ಬೆಲ್ಟ್ ಗೆ ಸಿಲುಕಿ ಮಗು ಸಾವು.
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಿಸ್ಕೆಟ್ ಕಾರ್ಖಾನೆಯೊಂದರಲ್ಲಿ ಬಿಸ್ಕೆಟ್ ತಿನ್ನಲು ಎಂದು ಹೋದ ಮೂರು ವರ್ಷದ ಗಂಡು ಮಗು ಯಂತ್ರದ ಬೆಲ್ಟ್ ಗೆ ಸಿಲುಕಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೂರು ವರ್ಷದ ಆಯುಷ್ ಚೌಹಾಣ್ ಮೃತಪಟ್ಟ ಮಗು. ಮಗು ತನ್ನ ತಾಯಿಯೊಂದಿಗೆ ಬಿಸ್ಕೆಟ್ ಫ್ಯಾಕ್ಟರಿಗೆ ಹೋಗಿದ್ದ, ಈ ಸಂದರ್ಭದಲ್ಲಿ ಮಗುವನ್ನು ಒಂದು ಕಡೆ ಕೂರಿಸಿ ತಾಯಿ ಪತಿಗೆ ಆಹಾರ ಕೊಟ್ಟು ಬರಲು ತೆರಳಿದ್ದರು. ಈ ವೇಳೆ ಯಂತ್ರದಲ್ಲಿದ್ದ ಬಿಸ್ಕೆಟ್ ನೋಡಿ ಒಂದು ಬಿಸ್ಕೆಟ್ ತೆಗೆದುಕೊಳ್ಳಲು ಮಗು ಯಂತ್ರಕ್ಕೆ ಕೈ ಹಾಕಿದ ಆದರೆ ಬೆಲ್ಟ್ ಗೆ ಕೈ ಸಿಕ್ಕಿ ಕೊಂಡಿದೆ. ಕೂಡಲೇ ಕಾರ್ಖಾನೆ ಸಿಬ್ಬಂದಿಗಳು ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.