• 17 ಫೆಬ್ರವರಿ 2025

ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದು ಚಾಲಕ ಮೃತ್ಯು.

 ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದು ಚಾಲಕ ಮೃತ್ಯು.
Digiqole Ad

ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದು ಚಾಲಕ ಮೃತ್ಯು.

ಬೆಂಗಳೂರು: ಬೆಂಗಳೂರಿನ ಜಯನಗರದ 4 ನೇ ಟಿ ಬ್ಲಾಕ್ ನಲ್ಲಿ ಚಲಿಸುತ್ತಿದ್ದ ಆಟೋದ ಮೇಲೆ ಮರದ ಕೊಂಬೆ ಬಿದ್ದು ಚಾಲಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಪಾದರಾಯನ ಪುರದ ನಿವಾಸಿ ಆಟೋ ಚಾಲಕ ಖಲೀಲ್(55) ಮೃತಪಟ್ಟ ವ್ಯಕ್ತಿ. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಬೆಳಗ್ಗೆ 8:30 ಕ್ಕೆ ಖಲೀಲ್ ಅವರು ಜಯನಗರದ ನಾಲ್ಕನೇ ಟಿ ಬ್ಲಾಕ್ ನಲ್ಲಿ ಆಟೋ ಚಲಾಯಿಸಿಕೊಂಡು ತೆರಳುತ್ತಿದ್ದರು, ಈ ವೇಳೆ ಆಟೋ ಮೇಲೆ ಮರದ ಕೊಂಬೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿನ್ನ ಸಂಜೆ ಮೃತಪಟ್ಟಿದ್ದಾರೆ.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ