ವಿದ್ಯೆ ಬುದ್ಧಿ ಸಿದ್ಧಿ ಪ್ರಾಪ್ತಿಗಾಗಿ “ಪುಳಿತ್ತ ಅಡರ್”
ವಿದ್ಯೆ ಬುದ್ಧಿ ಸಿದ್ಧಿ ಪ್ರಾಪ್ತಿಗಾಗಿ “ಪುಳಿತ್ತ ಅಡರ್”
ಶಾಲೆಯ ಮಾಡಿನ ಹೆಂಚು ಹಾರಿ ಹೋಗುವಷ್ಟು.. ಬೊಬ್ಬೆ ಕೇಕೆ.. ನಗು .. ಆರ್ಭಟ, ಆಟ.. ನಲ್ವತ್ತು ನಲ್ವತೈದು ಮಕ್ಕಳು ಇದ್ದ ತರಗತಿ.. ಅಷ್ಟೂ ಮಕ್ಕಳ ಸೌಂಡನ್ನು. ಸೈಲೆಂಟಾಗಿ ಮಾಡುತಿದ್ದ ಮಾಂತ್ರಿಕ ದಂಡ ಅಂದ್ರೆ ಅದು.. “ಪುಳಿತ್ತ ಅಡರ್ ”
ಅಧ್ಯಾಪಕರು ಕೈಯನು ಹಿಂದೆ ಕಟ್ಟಿಕೊಂಡು ತರಗತಿಯ ಬಾಗಿಲ ಬಳಿ ಬಂದು ನಿಂತಾಗ.. ಅಷ್ಟೊಂದು ಗದ್ದಲಗಳು ನೀರು ಎರಚಿ ನಂದಿಸಿದಂತ್ತೆ.. ನೀರವ ಮೌನ…. ಸೂಜಿ ಬಿದ್ದರೂ ಸದ್ದು ಕೇಳಿಸುವಷ್ಟು.. ನಿಶಬ್ದ..
ಈ ಪುಳಿತ ಅಡರ್ ಅಧ್ಯಾಪಕರ ಕೈಯಲ್ಲಿ ಇದ್ದರೆ ಸಾಕು.. ಮರೆತು ಹೋಗಿದ್ದ ಪಾಠಗಳು..ಸರಸರನೆ ನೆನಪಿಗೆ ಬರುತ್ತಿದ್ದವು… ಅಷ್ಟೊಂದು ಫವರ್ ಇತ್ತು ಈ ಪುಳಿತ ಅಡರಿಗೆ..
ಓಟೆ ಪುಳಿ ಅಂದರೆ ಹುಣಿಸೇಹಣ್ಣು.. ಹುಣಿಸೆ ಮರದ ಗೆಲ್ಲಿನಿಂದ ಮಾಡಿದ ಎಳೆ ಬೆತ್ತ.. ಬೇಗ ತುಂಡು ಆಗದ. ನಾರು ಬೆತ್ತ.. ಒಮ್ಮೆ ಕಾಲಿಗೆ ಬೀಸಿದರೆ ಛಿಟೀರ್ ಎದು ಸದ್ದಿನೊಂದಿಗೆ ಕಾಲಲ್ಲಿ ಅದರ ಅಚ್ಚು ಬೀಳುತಿತ್ತು .. ಮನೆಯಲ್ಲಿ ಕೂಡ ನಮ್ಮನ್ನು ಕಂಟ್ರೋಲು ಮಾಡುವ ರಿಮೋಟ್ ಅಂದ್ರೆ ಇದೇ ಪುಳಿತ್ತ ಅಡರ್… ಹಾಗೆ ಒಮ್ಮೆ ಇದರ ರುಚಿ ನೋಡಿದ ಅನುಭವದಿಂದ ಅದನ್ನು ನೋಡಿದ ಕೂಡಲೇ. ಮುದುಡಿ ಕುಳಿತು ಆಟ ಓಡಾಟ ಹಾರಾಟ ಚೀರಾಟವನು ನಿಲ್ಲಿಸಿ ಪಾಠವನ್ನು ಮನಸಿನಲ್ಲಿ ಓದಲು ಪ್ರಾರಂಭ…
ಶಾಲೆಯಲ್ಲಿ. ಅಧ್ಯಾಪಕರು ಕೋಲು ಮಿಠಾಯಿ ಬೇಕಾ ..ಎಂದು ಕೇಳಿದರೆ ಬೇಡ ಸರ್.. ಎಂದು ಓದಲು ಬರೆಯಲು ಶುರು..
ಇಂತಹ ದಿವ್ಯವಾದ ಮಾಂತ್ರಿಕ ದಂಡ ಈಗ ಹಿಡಿಯುವಂತ್ತಿಲ್ಲ.. ಮನೆಯಲ್ಲಿ ಎರಡು ಮಕ್ಕಳ ಬೊಬ್ಬೆಗೆ.. ತಲೆ ಸಿಡಿದು.. ಯಪ್ಪಾ.. ಯಾಕೆ ನಿಮ್ಗೆ ರಜೆ ಕೊಡ್ತಾರೊ.. ಒಮ್ಮೆ ಶಾಲೆ ಶುರು ಆಗ್ತಿದ್ರೆ ಸಾಕಪ್ಪ.. ಸಾಕಾಯಿತು ನಿಮ್ಮ ಬೊಬ್ಬೆ ಎಂದು ನಾವು ಹೇಳುವ ನಾವು. ಅದೇ ಬೊಬ್ಬೆ ಹಾಕುವ ಐವತ್ತು ತುಂಟ ಮಕ್ಕಳು ಒಂದೇ ತರಗತಿಯಲ್ಲಿ ಇದ್ದರೆ.. ಅಲ್ಲಿನ ಶಿಕ್ಷಕರ ತಲೆ ಹೇಗಾಗುವುದು.. ಎಲ್ಲವನ್ನೂ ಸಹನೆಯಿಂದ ಸಹಿಸುತ್ತಾ ವಿದ್ಯೆಯನ್ನು ಕಲಿಸಿ , ತಿದ್ದಿ, ತೀಡಿ ಬುದ್ಧಿ ಹೇಳಿ.. ಮುಂದಿನ ಬದುಕಿಗೆ ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು..
ಈಗ ನನ್ನನ್ನು ಹತ್ತು ಜನ ಗುರುತಿಸುತ್ತಾರೆ. ಅಂದ್ರೆ ಅದಕ್ಕೆ ಮುಖ್ಯ ಕಾರಣ ಗುರುಗಳು.. ಪ್ರತಿಯೊಂದು ಹಂತದಲ್ಲೂ ಒಂದೊಂದು ಗುರುಗಳು ಇದ್ದಾರೆ .. ಅವರಿಗೆಲ್ಲರಿಗೂ.. ಶರಣೂ ಶರಣಾರ್ಥಿ 🙏
✍️ ಎಂ ರಾಮ ಈಶ್ವರಮಂಗಲ
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.