• 24 ಮಾರ್ಚ್ 2025

ಸೆಪ್ಟೆಂಬರ್ 10: ವಿಶ್ವ ಆತ್ಮಹತ್ಯೆ ತಡೆ ದಿನ.

 ಸೆಪ್ಟೆಂಬರ್ 10: ವಿಶ್ವ ಆತ್ಮಹತ್ಯೆ ತಡೆ ದಿನ.
Digiqole Ad

ಸೆಪ್ಟೆಂಬರ್ 10: ವಿಶ್ವ ಆತ್ಮಹತ್ಯೆ ತಡೆ ದಿನ.

ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ‘ವಿಶ್ವ ಆತ್ಮಹತ್ಯೆ ತಡೆ’ ದಿನವನ್ನು ಆಚರಿಸಲಾಗುತ್ತದೆ. ಆತ್ಮಹತ್ಯೆಯನ್ನು ತಡೆಯಬಹುದೆಂದು ಜಗತ್ತಿನಾದ್ಯಂತ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಆತ್ಮಹತ್ಯೆ ತಡೆಗಟ್ಟಿವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಯೋಜಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(WHO) ಈ ದಿನದ ಸಹ ಪ್ರಾಯೋಜಕರಾಗಿದ್ದಾರೆ. ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ಆತ್ಮಹತ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳೊಂದಿಗೆ ಹೋರಾಡುವ ವ್ಯಕ್ತಿಗಳಿಗೆ ಮಾನಸಿಕ ಆರೋಗ್ಯದ ಅರಿವು ಮೂಡಿಸುವುದು, ಹಸ್ತಕ್ಷೇಪ ಮತ್ತು ಬೆಂಬಲದ ಪ್ರಾಮುಖ್ಯತೆಯನ್ನು ಈ ದಿನ ಒತ್ತಿ ಹೇಳುತ್ತದೆ. ಈ ದಿನ ಜನರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಾಚಿಕೆ ಇಲ್ಲದೆ ಸಹಾಯವನ್ನು ಪಡೆಯಲು ಪ್ರೋತ್ಸಾಹಿಸುತ್ತದೆ. 2003ರಲ್ಲಿ ಸ್ಥಾಪನೆಯಾದ ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್, ಇದು ‘ಆತ್ಮಹತ್ಯೆಗಳನ್ನು ತಡೆಗಟ್ಟಬಹುದು’ ಎಂಬ ಸಂದೇಶವನ್ನು ನೀಡುತ್ತದೆ. ಪ್ರತಿವರ್ಷ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಂಸ್ಥೆಗಳು ಸರ್ಕಾರಗಳು ಈ ದಿನವನ್ನು ಆಚರಿಸುತ್ತದೆ. ಈ ದಿನದಂದು ಹಲವಾರು ಶಿಕ್ಷಣ ಕಾರ್ಯಕ್ರಮಗಳು, ಜಾಗೃತ ಅಭಿಯಾನಗಳು ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಯಾವುದೇ ಕಾರಣಕ್ಕೆ ಪರಿಹಾರವಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಮಾಡಲೇಬಾರದು.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ