• 7 ಡಿಸೆಂಬರ್ 2024

ಕೇರಳದಲ್ಲಿ ನಿಫಾ: ಹೈ ಅಲರ್ಟ್, ಮಾಸ್ಕ್ ಕಡ್ಡಾಯ.

 ಕೇರಳದಲ್ಲಿ ನಿಫಾ: ಹೈ ಅಲರ್ಟ್, ಮಾಸ್ಕ್ ಕಡ್ಡಾಯ.
Digiqole Ad

ಕೇರಳದಲ್ಲಿ ನಿಫಾ: ಹೈ ಅಲರ್ಟ್, ಮಾಸ್ಕ್ ಕಡ್ಡಾಯ.

ತಿರುವನಂತಪುರ : ಕೇರಳದಲ್ಲಿ ನಿಫಾ ವೈರಸ್ ಹೆಚ್ಚುತ್ತಿದ್ದು, ನಿಫಾ ವೈರಸ್ ನಿಂದ ಎರಡನೇ ಸಾವು ಪ್ರಕರಣ ವರದಿಯಾದ ಬೆನ್ನಲ್ಲೇ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ವಾಂಡೂರ್ ನ 23 ವರ್ಷದ ವಿದ್ಯಾರ್ಥಿ ಸೆಪ್ಟೆಂಬರ್ 9ರಂದು ನಿಫಾ ವೈರಸ್ ನಿಂದ ಮೃತಪಟ್ಟಿದ್ದಾನೆ.ಈ ವೈರಸ್ ಗೆ ಈ ವರ್ಷ ಬಲಿಯಾದ ಎರಡನೇ ಪ್ರಕರಣ ಇದಾಗಿದೆ. ಇದೀಗ ಮಲಪ್ಪುರಂ ಜಿಲ್ಲೆಗೆ ಸರಕಾರವು ಹೈ ಅಲರ್ಟ್ ಘೋಷಿಸಿದೆ . ನಿಫಾ ವೈರಸ್ ಪತ್ತೆಯಾದ ಸುತ್ತಮುತ್ತಲಿನ ತಾಲೂಕು ಹಾಗೂ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳಿಗೆ ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಸಿನಿಮಾ ಥಿಯೇಟರ್ ಗಳನ್ನು ಮುಚ್ಚಲು ಸೂಚಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ 7 ಗಂಟೆಯವರೆಗೆ ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ, ಸಾರ್ವಜನಿಕ ಪ್ರದೇಶಗಳಲ್ಲಿ ಜನದಟ್ಟಣೆ ನಿಷೇಧಿಸಲಾಗಿದೆ.
ಕೇರಳದಲ್ಲಿ ನಿಫಾ ವೈರಸ್ ಹೆಚ್ಚಾಗುತ್ತಿದ್ದು ಜನರು ಮುಂಜಾಗ್ರತಾ ಕ್ರಮ ವಹಿಸುವಂತೆ ಕೇರಳ ಸರಕಾರ ಸೂಚನೆ ನೀಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ