ಕಡಬ: ನೇಣಿಗೆ ಶರಣಾದ 70 ರ ವೃದ್ಧ.
ಕಡಬ: ನೇಣಿಗೆ ಶರಣಾದ 70 ರ ವೃದ್ಧ.
ಕಡಬ: ವೃದ್ಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ನಡೆದಿದೆ.
ಕುಂತೂರು ಬಾಚಡ್ಕ ನಿವಾಸಿ ಅಣ್ಣಿ ಗೌಡ ನೇಣಿಗೆ ಶರಣಾದ ವ್ಯಕ್ತಿ ಅವರಿಗೆ 70 ವರ್ಷ ವಯಸ್ಸಾಗಿತ್ತು. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಪರೀತ ಅಮಲು ಪದಾರ್ಥ ಸೇವಿಸುವ ಚಟವಿದ ಅಣ್ಣಿ ಗೌಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಿನ್ನೆ ಮಧ್ಯಾಹ್ನ ಅವರ ಮನೆಯ ಸಮೀಪದ ಹಲಸಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡಿದ್ದರು, ಇದನ್ನು ಗಮನಿಸಿದ ಅವರ ಪುತ್ರರಿಬ್ಬರು ಹಗ್ಗವನ್ನು ತುಂಡು ಮಾಡಿ ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು, ವೈದ್ಯರು ಪರೀಕ್ಷಿಸಿ ಅಣ್ಣಿ ಗೌಡ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.