ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಕಾಣಿಯೂರು ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಕಾಣಿಯೂರು ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ.
ಸತತ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿಯವರ 74ನೇ ಜನ್ಮದಿನದ ಅಂಗವಾಗಿ ಅವರ ಆರೋಗ್ಯ,ಆಯುಷ್ಯ,ರಕ್ಷಣೆಗಾಗಿ ಹಾಗೂ ಅವರ ಆಡಳಿತದಲ್ಲಿ ಭಾರತದ ದೇಶವಾಸಿಗಳು ಪರಸ್ಪರ ಶಾಂತಿ, ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬಾಳಿ ಬದುಕುವಂತಾಗಬೇಕು ಎಂದು ಕಾಣಿಯೂರು, ಚಾರ್ವಾಕ, ದೋಳ್ಪಾಡಿಯ ಬಿಜೆಪಿಯ ಕಾರ್ಯಕರ್ತರು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಕಾರ್ಯದರ್ಶಿ, ಕಾಣಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಕೆ .ಎಸ್ .ಉದನಡ್ಕ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಧರ್ಮೇಂದ್ರ ಕಟ್ಟತ್ತಾರು, ಸುಳ್ಯ ಮಂಡಲ ಸಮಿತಿಯ ಸದಸ್ಯರಾದ ಧನಂಜಯ ಕೇನಾಜೆ,ಶಕ್ತಿ ಕೇಂದ್ರದ ಪ್ರಮುಖರಾದ ಸತ್ಯನಾರಾಯಣ ಕಲ್ಲೂರಾಯ, ಗೋಪಾಲಕೃಷ್ಣ ಎಳುವೆ, ಬಾಲಕೃಷ್ಣ ಇಡ್ಯಡ್ಕ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಲಕ್ಷ್ಮಣ ಗೌಡ ಮುಗರಂಜ, ವಿಶ್ವನಾಥ ದೇವಿ ನಗರ, ಕಾರ್ಯದರ್ಶಿ ಭವೀಶ್ ಕೂರೇಲು, ಮಾಧವ ಕೋಲ್ಪೆ, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೆಳಗಿನಕೇರಿ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ದೇವಿಪ್ರಸಾದ್ ದೋಳಾಡಿ, ತಾರಾನಾಥ ಇಡ್ಯಡ್ಕ, ಲಲಿತಾ ದರ್ಖಾಸು, ಸುನಂದ ಅಬ್ಬಡ, ಮೀರಾ, ಅಂಬಾಕ್ಷಿ ಕೂರೇಲು, ತೇಜಕುಮಾರಿ ಉದ್ದಡ್ಡ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಚಾರ್ವಾಕ ಸಿ. ಎ ಬ್ಯಾಂಕ್ ನಿರ್ದೇಶಕರಾದ ಸುಂದರ ದೇವಸ್ಯ, ಪರಮೇಶ್ವರ ಅನಿಲ, ಕಾಣಿಯೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸುಂದರ ಬೆದ್ರಾಜೆ, ಚಾರ್ವಾಕ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಗೋಪಾಲಕೃಷ್ಣ ಬಾರೆಂಗಳ, ಗಣೇಶ್ ಮುಂಗ್ಲಿಮಜಲು, ರಾಮಣ್ಣ ಗೌಡ ಪೊನ್ನೆತ್ತಡಿ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.