ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇದ್ಯಾ..ಹಾಗಾದ್ರೆ ಇನ್ಮೇಲೆ ಹುಷಾರಾಗಿರಿ!
ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಇದ್ಯಾ..ಹಾಗಾದ್ರೆ ಇನ್ಮೇಲೆ ಹುಷಾರಾಗಿರಿ!
ನವದೆಹಲಿ: ಹಲವಾರು ಹಣಕಾಸು ಕಾರ್ಯಗಳಿಗೆ ಪಾನ್ ಕಾರ್ಡ್ ಅವಶ್ಯಕವಾಗಿ ಬೇಕಾಗುತ್ತದೆ. ದೇಶದ ಗುರುತು ದಾಖಲೆಗಳಲ್ಲಿ ಪಾನ್ ಕಾರ್ಡ್ ಕೂಡ ಒಂದಾಗಿದೆ. ನಿಯಮದ ಪ್ರಕಾರ ಒಬ್ಬರು ಒಂದೇ ಪಾನ್ ನಂಬರ್ ಮಾತ್ರವೇ ಬಳಸಬಹುದು, ಎರಡು ಮತ್ತು ಹೆಚ್ಚು ಪಾನ್ ನಂಬರ್ ಹೊಂದಿರುವುದು ಆದಾಯ ತೆರಿಗೆ ಕಾಯ್ದೆಯ ಉಲ್ಲಂಘನೆ ಆಗುತ್ತದೆ. ಈ ರೀತಿಯ ಅಕ್ರಮ ಕಂಡುಬಂದಲ್ಲಿ ಆದಾಯ ತೆರಿಗೆ ಇಲಾಖೆ 272 ಬಿ ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬಹುದು. ಈ ಕಾಯ್ದೆಯ ಪ್ರಕಾರ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ 10,000 ರೂ. ದಂಡ ವಿಧಿಸಬಹುದಾಗಿದೆ.
ಕ್ರೆಡಿಟ್ ಕಾರ್ಡ್ ಗಳ ಗಾತ್ರದಲ್ಲಿರುವ ಪಾನ್ ಕಾರ್ಡಿನಲ್ಲಿ ವ್ಯಕ್ತಿಯ ಹೆಸರು, ಭಾವಚಿತ್ರ, ಜನ್ಮ ದಿನಾಂಕ, ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ ನಮೂದಿಸಲಾಗಿದೆ. ವ್ಯಕ್ತಿಗಳ ಹೆಸರಿನಲ್ಲಿ ಎಷ್ಟು ಬ್ಯಾಂಕು ಖಾತೆಗಳಿವೆ, ಸಾಲಗಳಿಗೆ, ಹೂಡಿಕೆಗಳಿವೆ, ಠೇವಣಿಗಳಿವೆ ಮುಂತಾದ ಸಮಗ್ರ ಮಾಹಿತಿಯನ್ನು ಪಾನ್ ನಂಬರ್ ಮೂಲಕ ಟ್ರ್ಯಾಕ್ ಮಾಡಬಹುದು ಈ ಕಾರಣಕ್ಕೆ ಪಾನ್ ಕಾರ್ಡ್ ಬಹಳ ಅವಶ್ಯಕ ದಾಖಲೆ ಎನಿಸಿದೆ.