ಈಶ್ವರಮಂಗಲದಲ್ಲಿ ಕಾಡಾನೆ ಹಾವಳಿ !
ಈಶ್ವರಮಂಗಲದಲ್ಲಿ ಕಾಡಾನೆ ಹಾವಳಿ
ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಕೃಷಿಗೆ ಹಾನಿಗೈದಿರುವ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತ್ತಡ್ಕ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ
ನೆಟ್ಟಣಿಗೆ ಮುಡ್ನೂರು ಗ್ರಾಮದ ಕೆಮ್ಮತ್ತಡ್ಕದ ಗೋವಿಂದ ನಾಯ್ಕ ಅವರ ತೋಟಕ್ಕೆ ರಾತ್ರಿ ಆನೆ ಲಗ್ಗೆ ಇರಿಸಿ ಕೃಷಿಗೆ ಹಾನಿ ಉಂಟುಮಾಡಿದೆ ಹಲವು ತೆಂಗು ಹಾಗೂ ಅಡಿಕೆ ಗಿಡ, ಬಾಳೆ ಗಿಡಗಳನ್ನು ನಾಶಗೊಳಿಸಿದೆ ಹಲವು ತಿಂಗಳಿನಿಂದ ನೆಟ್ಟಣಿಗೆ ಮುಡ್ನೂರು ಆಸುಪಾಸಿನ ಭಾಗದಲ್ಲಿ ಕಾಡಾನೆ ಓಡಾಟ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿತ್ತು