• 7 ಡಿಸೆಂಬರ್ 2024

ಕಡಬ: ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆ ರಚನೆ ಕಾರ್ಯಕ್ರಮ. ದೂಷಣೆ ಮಾಡುವವರ ವಿರುದ್ದ ವಾದ ಮಾಡದೇ ಸಾಧನೆಯಲ್ಲಿ ಉತ್ತರಿಸಬೇಕು.-ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಅಭಿಪ್ರಾಯ.

 ಕಡಬ: ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆ ರಚನೆ ಕಾರ್ಯಕ್ರಮ. ದೂಷಣೆ ಮಾಡುವವರ ವಿರುದ್ದ ವಾದ ಮಾಡದೇ ಸಾಧನೆಯಲ್ಲಿ ಉತ್ತರಿಸಬೇಕು.-ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಅಭಿಪ್ರಾಯ.
Digiqole Ad

ಕಡಬ: ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆ ರಚನೆ ಕಾರ್ಯಕ್ರಮ. ದೂಷಣೆ ಮಾಡುವವರ ವಿರುದ್ದ ವಾದ ಮಾಡದೇ ಸಾಧನೆಯಲ್ಲಿ ಉತ್ತರಿಸಬೇಕು.-ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಅಭಿಪ್ರಾಯ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಸಂರಕ್ಷಣಾ ವೇದಿಕೆ ಸಮಿತಿ ರಚನೆಯು ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.  ಕಾರ್ಯಕ್ರಮವನ್ನು ಹಿರಿಯರಾದ ಶಿವಣ್ಣ ಕೋಡಿಂಬಾಳ ಉಧ್ಘಾಟಿಸಿದರು.  ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಕಳೆದ 22 ವರ್ಷಗಳಿಂದ ಪ್ರಗತಿಬಂಧು ಸ್ವಸಹಾಯ ಸಂಘಗಳ ರಚನೆ ಸಮುದಾಯದ ಅವಶ್ಯಕತೆಗಳ ಗುರುತಿಸುವಿಕೆ ಮೂಲಕ ಗ್ರಾಮದ ದುರ್ಬಲ ಕುಟುಂಬದ ಸರ್ವತೋಮುಖ ಅಭಿವಧ್ಧಿ ಹಾಗೂ ಸಮುದಾಯದ ಅವಶ್ಯಕತೆಗಳಿಗೆ ಅನುದಾನಗಳ ಮೂಲಕ ಪ್ರೇರಣೆ ನೀಡುತ್ತಿದ್ದು ಬಿಳಿನೆಲೆ ವಲಯದಲ್ಲಿ 05 ಕೋಟಿಗಿಂತ ಹೆಚ್ಚು ಅನುದಾನಗಳು ಹಾಗೂ 60ಕೋಟಿಗಿಂತ ಹೆಚ್ಚು ಆರ್ಥಿಕ ಸಹಕಾರವನ್ನು ನೀಡಿರುವ ಬಗ್ಗೆ ವಿವರವನ್ನು ನೀಡಿದ್ದು ಹಾಗೂ ಗ್ರಾಮಾಭಿವೃಧ್ಧಿ ಯೋಜನೆಯ ಮುಂದಿನ ಅಭಿವೃಧ್ಧಿ ಕಾರ್ಯಕ್ರಮದ ಕ್ರೀಯಾಯೋಜನೆಗಳ ಅನುಷ್ಟಾನ ಮಾಡುವಲ್ಲಿ ಒಂದಷ್ಟು ಅಪಪ್ರಚಾರಗಳನ್ನು ಮಾಡುತ್ತಿರುವ ಸಮಾಜ ಘಾತುಕರ ಉದ್ದೇಶದ ಬಗ್ಗೆ ವಲಯದ ಎಲ್ಲರಿಗೂ ತಿಳುವಳಿಕೆ ಮೂಡಿಸುವುದು ಸಂರಕ್ಷಣಾ ವೇದಿಕೆಯ ಉದ್ದೇಶವಾಗಿದ್ದು ಇನ್ನೂ ಹೆಚ್ಚಿನ ಸೌಲಭ್ಶಗಳು ಯೋಜನೆಯ ಮೂಲಕ ದೊರಕಿಸಿಕೊಡುವಲ್ಲಿ ಎಲ್ಲರೂ ಸಹಕಾರ ನೀಡಿ ಯೋಜನೆಯ ಕಾರ್ಯಕ್ರಮಗಳನ್ನು ಸಹಿಸಲಾಗದೆ ಸಾಮಾಜಿಕ ಜಾಲತಾಣ ಗಳ ಮೂಲಕ ದೂಷಿಸುವವರ ವಿರುದ್ದ ವಾದ ಮಾಡದೇ ಸಾಧನೆಯಲ್ಲಿ ಉತ್ತರಿಸುವಂತಾಗಲಿ ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆಯ ವಿವಿಧ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆದಿದ್ದು ವೇದಿಕೆಯ ಅಧ್ಶಕ್ಷರಾಗಿ ಲೋಕನಾಥ ಎಮ್ ಕೈಕಂಭ , ಉಪಾಧ್ಯಕ್ಷರುಗಳಾಗಿ ಉಷಾ ಸತೀಶ್ ಬಿಳಿನೆಲೆˌ ಗೊಪಾಲಕೃಷ್ಣ ನೆಕ್ಕಿಲಾಡಿ ˌ ಕಾರ್ಯದರ್ಶಿಯಾಗಿ ವಿನೋದ್ ಕೊಂಬಾರು ˌ ಜತೆ ಕಾರ್ಯದರ್ಶಿಯಾಗಿ ಲೋಕೇಶ್ವರಿ ಸಿರಿಬಾಗಿಲು ಹಾಗೂ ಕೋಶಾಧಿಕಾರಿಯಾಗಿ ವೀಣಾ ಭಟ್ ಕೊಣಾಜೆ ಆಯ್ಕೆಗೊಂಡರು. ವೇದಿಕೆಯಲ್ಲಿ ಬಿಳಿನೆಲೆ ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಣ ಉಪಸ್ಥಿತರಿದ್ದರು. ಕೋಣಾಜೆ ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿ ಕೆಂಜಾಲ ಸೇವಾಪ್ರತಿನಿಧಿ ಗಣೇಶ್ ಧನ್ಯವಾದ ನೀಡಿದರು. ಬಿಳಿನೆಲೆ ಸೇವಾಪ್ರತಿನಿಧಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.  ಸೇವಾಪ್ರತಿನಿಧಿಗಳಾದ ಜ್ಞಾನಸೇಲ್ವೀ ಕೊಡಿಂಬಾಳ , ನೇತ್ರಾ ಬೊಳ್ಳೂರು, ಗಣೇಶ್ ಐತ್ತೂರುˌ ದಿನೇಶ್ 102ನೆಕ್ಕಿಲಾಡಿˌ ರೇಖಾ ಸುಳ್ಯ ಭವ್ಯ ಶ್ರೀ ಕೈಕಂಭ ಹಾಗೂ ವಲಯದ ಒಕ್ಕೂಟದ ಅಧ್ಯಕ್ಷರುಗಳು ಫಧಾದಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ