ಇಲ್ಲಿದೆ 👇🏻 ಪಂಚಮುಖಿ ಆಂಜನೇಯ ಸ್ವಾಮಿಯ ಕ್ಷೇತ್ರದ ವಿಶೇಷತೆ
ಇಲ್ಲಿದೆ 👇🏻 ಪಂಚಮುಖಿ ಆಂಜನೇಯ ಸ್ವಾಮಿಯ ಕ್ಷೇತ್ರದ ವಿಶೇಷತೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯಲ್ಲಿನ ಪಡುವನ್ನೂರು ಮತ್ತು ನೆಟ್ಟಣಿಗೆ ಮುಡ್ನೂರು ಗ್ರಾಮಗಳ ಗಡಿ ಪ್ರದೇಶದಲ್ಲಿ ಹನುಮಗಿರಿ ಎಂದು ಕರೆಯಲ್ಪಡುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರವು ಒಂದು
ಧರ್ಮಶ್ರೀ ಪ್ರತಿಷ್ಟಾನ(ರಿ) ಈಶ್ವರಮಂಗಲ ಸೇವಾಸಂಸ್ಥೆಯವರಿಂದ ವಿಶ್ವದ ಅತೀ ಎತ್ತರದ ಶ್ರೀ ಪಂಚಮುಖಿ [[ಹನುಮಂತ|ಆಂಜನೇಯನ] ವಿಗ್ರಹವು ಪ್ರತಿಷ್ಟಾಪನೆಯಾಗಿದೆ. ಆಂಜನೇಯ ವಿಗ್ರಹವು ೧೧ ಅಡಿ ಎತ್ತರವಿದ್ದು ಕಾರ್ಕಳದ ಕೃಷ್ಣಶಿಲೆಯಿಂದ ರೂಪಗೊಂಡ ಏಕಶಿಲಾ ವಿಗ್ರಹವಾಗಿದೆ
ದಕ್ಷಿಣಕ್ಕೆ ನರಸಿಂಹ, ಉತ್ತರಕ್ಕೆ ವರಾಹ, ಊರ್ಧ್ವಮುಖಕ್ಕೆ ಹಯಗ್ರೀವ, ಪಶ್ಚಿಮಕ್ಕೆ ಗರುಡ ಇರುವ ಪಂಚಮುಖಿ ಆಂಜನೇಯ ವಿಗ್ರಹವು ಶನಿದೋಷ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದೆ ಇಲ್ಲಿ ದೇವರಿಗೆ ಗರ್ಭಗುಡಿ ಇಲ್ಲವಾದರು ಬೆಳಿಗ್ಗೆಯಿಂದ ಸಂಜೆಯ ತನಕ ಪೂಜೆ, ಪುನಸ್ಕಾರಗಳು ನಡೆಯುತ್ತಲೇ ಇರುವುದು ಇಲ್ಲಿಯ ವಿಶೇಷತೆ
ಈಶ್ವರಮಂಗಲ ಪೇಟೆಯ ಪ್ರವೇಶ ದ್ವಾರವನ್ನು ದಾಟಿ ಹತ್ತಾರು ಹೆಜ್ಜೆ ಮುಂದಿಟ್ಟಾಗ ಪ್ರವೇಶ ಮಂಟಪವು ನಮ್ಮನ್ನು ಸ್ವಾಗತಿಸುತ್ತದೆ. ಹನುಮಗಿರಿಯಲ್ಲಿ ನಮಗೆ ಮೊದಲಿಗೆ ಕಾಣಸಿಗುವುದು “ರಾಮಾಯಾಣ ಥೀಮ್ ಪಾರ್ಕ್” ಇದರ ಎಡಭಾಗದಲ್ಲಿ ರಾಮಾಯಣದ ಕಥಾನಕಗಳನ್ನು ಶಿಲೆಗಳಲ್ಲಿ ಕೆತ್ತಿ ಫಲಕಗಳ ಮೂಲಕ ಗೋಡೆಗಳಿಗೆ ತಾಗಿಸಿ ವಿವರಿಸಿದ್ದಾರೆ ಈ ಪಾರ್ಕ್ನಲ್ಲಿ ಸಂಪೂರ್ಣ ರಾಮಾಯಾಣವೇ ನೋಡಲು ಸಾಧ್ಯ ನಂತರ ಸುಂದರ ಉದ್ಯಾವನದ ಮಧ್ಯೆ ನಡೆದಾಡುವಾಗ ಕ್ಷೇತ್ರದ ಪ್ರಧಾನ ಭಾಗವಾದ ಆಂಜನೇಯನ ಮಂದಿರವು ಭಕ್ತರನ್ನು ತನ್ನತ್ತ ಸೆಳೆಯುತ್ತದೆ ಭಕ್ತರ ವಿಶ್ರಾಂತಿಗಾಗಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಅವಕಾಶವಿದೆ