• 3 ನವೆಂಬರ್ 2024

ಅ.8ರಿಂದ 14ರವರೆಗೆ ಮಂಗಳೂರಿನಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ:

 ಅ.8ರಿಂದ 14ರವರೆಗೆ ಮಂಗಳೂರಿನಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ:
Digiqole Ad

ಅ.8ರಿಂದ 14ರವರೆಗೆ ಮಂಗಳೂರಿನಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ:

ಮಂಗಳೂರು: ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮರಣ ದೇಗುಲದ ಆಚಾರ್ಯರ ಮಠ ವಠಾರದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.8ರಿಂದ 14ರವರೆಗೆ ನಡೆಯಲಿದೆ ಎಂದು ಶ್ರೀ ಶಾರದಾ ಮಹೋತ್ಸವ ಸಮಿತಿ ತಿಳಿಸಿದೆ.
ಅ.8ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಶಾರದಾ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಅ.13 ರವರೆಗೆ ದೀಪ ಅಲಂಕಾರ ಸಹಿತ ರಂಗ ಪೂಜೆ ನಡೆಯಲಿದೆ.

ಅ.13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ, ಬೆಳಗ್ಗೆ 10 ಗಂಟೆಗೆ ವಿದ್ಯಾರಂಭ, ಸಂಜೆ 6 ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ. ಅ.14 ರಂದು ಸಂಜೆ 5 ಗಂಟೆಗೆ ಶಾರದಾ ಮಾತೆಗೆ ಪೂರ್ಣಾಲಂಕಾರ, ರಾತ್ರಿ ವಿಸರ್ಜನೆ ಮತ್ತು ಶೋಭಾಯಾತ್ರೆ ನೆರವೇರಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ