ಮುರುಳ್ಯ ಶಾಸಕರಾದ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ಮುರುಳ್ಯ ಶಾಸಕರಾದ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ಭಾರತೀಯ ಜನತಾ ಪಕ್ಷದ ಸದಸ್ಯತನ ಅಭಿಯಾನದ ಅಂಗವಾಗಿ, ಸುಳ್ಯ ಮಂಡಲ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಮುರುಳ್ಯ ಗ್ರಾಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು .ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಮನೆ ಮನೆ ಭೇಟಿ ಮೂಲಕ ಬಿಜೆಪಿಗೆ ಪ್ರಾಥಮಿಕ ಸದಸ್ಯರನ್ನು ನೋಂದಾವಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ , ಸುಳ್ಯ ಮಂಡಲ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಸಂತ ನಡುಬೈಲು, ರೂಪ್ ರಾಜ್ ರೈ, ಬೂತ್ ಅಧ್ಯಕ್ಷ ಅಶೋಕ್ ಕುಮಾರ್ ರೈ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಾನಕಿ ಮುರುಳ್ಯ, ಪ್ರಮುಖರಾದ ಉಮೇಶ್ ರೈ ಮರುವಂಜ ಮತ್ತಿತರರು ಉಪಸ್ಥಿತರಿದ್ದರು.