• 2 ನವೆಂಬರ್ 2024

ಕಡಬದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಪ್ರತಿಭಟನೆ

 ಕಡಬದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಪ್ರತಿಭಟನೆ
Digiqole Ad

ಕಡಬದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಪ್ರತಿಭಟನೆ

ಸೆ.30 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ (ರಿ.) ದ.ಕ ಕರ್ನಾಟಕ ಇದರ ವತಿಯಿಂದ
ಕಡಬ ತಾಲೂಕಿನ ಗೋಳಿತೊಟ್ಟು , ಆಲಂತಾಯ , ಕೌಕ್ರಾಡಿ , ಬಲ್ಯ , ಇಚಿಲಂಪಾಡಿ , ದೋಳ್ಪಾಡಿ , ಸಿರಿಬಾಗಿಲು ,ಕೊಂಬಾರು , ಬಿಳಿನೆಲೆ , ಯೇನೆಕಲ್ಲು , ಸುಬ್ರಹ್ಮಣ್ಯ ,ಐನೆಕಿದು , ಬಳ್ಪ ,ಕೇನ್ಯ , ಶಿರಾಡಿ ವ್ಯಾಪ್ತಿಯ ಸಮಸ್ತ ಕಸ್ತೂರಿ ರಂಗನ್ ವರದಿ ಬಾದಿತ ಸಮಸ್ತ ನಾಗರಿಕರಿಂದ ಕಡಬ ಆಡಳಿತ ಸೌಧದ ಬಳಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಸಭೆ ಹಮ್ಮಿಕೊಳ್ಳಲಾಯಿತು
ಶ್ರೀ ಕಿಶೋರ್ ಶಿರಾಡಿ ಸಂಚಾಲಕರು ಮತ್ತು ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಪ್ರಮುಖರು ಮತ್ತು ಸ್ಥಳೀಯ ಪ್ರತಿನಿಧಿಗಳು , ಧಾರ್ಮಿಕ ಮುಖಂಡರು , ಸಾಮಾಜಿಕ ಹೋರಾಟಗಾರರು , ರೈತ ಮುಖಂಡರು ಹಾಗೂ ಕಸ್ತೂರಿ ರಂಗನ್ ವರದಿ ಭಾದಿತ ಗ್ರಾಮಸ್ಥರು ಬಾಗವಹಿಸಿದರು


ದಿನ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ತರುವ ಪ್ರಯತ್ನ ಸರಕಾರ ಮಾಡುತ್ತಾ ಬರುತ್ತಿದೆ ಆದುದರಿಂದ ಈ ಬಾಗದ ಜನರು ಆತಂಕ ಸ್ಥಿತಿಯಲ್ಲಿ ಇದ್ದಾರೆ ಈ ಎಲ್ಲಾ ಕಾರಣಗಳಿಂದ ಜನರು ಭಯಬೀತರಾಗಿದ್ದಾರೆ ಭಾರತ ದೇಶದ ಬೆನ್ನೆಲುಬು ರೈತ ಎಂಬ ಧ್ಯೇಯ ಇದ್ದರೂ ರೈತರನ್ನು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವ ಪ್ರಯತ್ನ ಮಾಡುತ್ತಿದೆ ಮತ್ತು ಯೋಜನೆಗಳು
ಅನುಷ್ಠಾನವಾಗುವುದರಿಂದ ಆಗುವ ತೊಂದರೆ ಮತ್ತು ಸಮಸ್ಯೆಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು

Digiqole Ad

ಈ ಸುದ್ದಿಗಳನ್ನೂ ಓದಿ