• 17 ಫೆಬ್ರವರಿ 2025

ಬ್ರಹ್ಮರಗುಂಡದಲ್ಲಿ ಮೊಗೇರ್ಕಳ ದೈವಗಳ ಮಂಜ ಸೇವೆ :

 ಬ್ರಹ್ಮರಗುಂಡದಲ್ಲಿ ಮೊಗೇರ್ಕಳ ದೈವಗಳ ಮಂಜ ಸೇವೆ :
Digiqole Ad

ಬ್ರಹ್ಮರಗುಂಡದಲ್ಲಿ ಮೊಗೇರ್ಕಳ ದೈವಗಳ ಮಂಜ ಸೇವೆ :

ನಿಡ್ಪಳ್ಳಿ : ಐತಿಹಾಸಿಕ ಸ್ಥಳವಾಗಿರುವ ಕೆಂಪು ಕೇಪುಲಾಜೆ ನಾಗಬಿರ್ಮರ , ಬ್ರಹ್ಮರಗುಂಡ ಎಂಬಲ್ಲಿ ಮೊಗೇರ್ಕಳ ದೈವಗಳ ಮಂಜ ಸೇವೆಯ ಕಾರ್ಯಕ್ರಮವು 29/9/24 ರಂದು ನಡೆಯಿತು. ಬೋರ್ಕರ್ ವಂಶಸ್ಥರಿಗೆ ಸೇರಿದ ಜಾಗದಲ್ಲಿ ನಿಂತು ಹೋಗಿದ್ದ ಮಂಜಸೇವೆಯು ಇತ್ತೀಚೆಗೆ ನಡೆದ ಪ್ರಶ್ನಾ ಚಿಂತನೆಯಲ್ಲಿ ಮುಂದುವರಿಸಬೇಕೆಂದು ಕಂಡುಬಂದಿತ್ತು. ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಆಲಂಕಾರು ( ಆರು ಜಿಲ್ಲೆಗಳ ಸಂಯುಕ್ತ ವೇದಿಕೆ) ಇದರ ನೇತೃತ್ವದಲ್ಲಿ ಸರ್ವ ಮೊಗೇರ ಬಾಂಧವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆದು ಬಂತು. ಮೊದಲಾಗಿ ಮೊಗೇರ ದೈವಗಳ ಆರಾಧ್ಯ ದೇವರಾದ ನಾಗಬಿರ್ಮರಿಗೆ ತಂಬಿಲ ಸೇವೆ ನಂತರ ಮೊಗೇರ ದೈವಗಳಿಗೆ ಮಂಜಸೇವೆಯನ್ನು ನಿಡ್ಪಳ್ಳಿಯ ಗುರಿಕಾರರ ನೇತೃತ್ವದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ಪುನರ್ ರಚನೆಯ ಕಾರ್ಯಕ್ರಮ ಅಕ್ಟೋಬರ್ 6 ನೇ ತಾರೀಕು ಪುತ್ತೂರಿನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಹಾಸನ,ಚಿಕ್ಕಮಗಳೂರು, ಸೇರಿದಂತೆ ಕರ್ನಾಟಕ ಹಾಗೂ ಕೇರಳದ ಎರಡು ಸಾವಿರಕ್ಕೂ ಹೆಚ್ಚಿನ ಭಕ್ತರ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅನ್ನದಾನದ ವ್ಯವಸ್ಥೆಯನ್ನು ನಿಡ್ಪಳ್ಳಿ ಗ್ರಾಮದ ಮೊಗೇರ ಬಾಂಧವರು ಹಾಗೂ ಪಾನಕದ ವ್ಯವಸ್ಥೆಯನ್ನು ಶ್ರೀ ಮಹಾಲಿಂಗೇಶ್ವರ ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್, ವತಿಯಿಂದ , ಹಾಗೂ ಬೆಳಗಿನ ಉಪಾಹಾರವನ್ನು ರಾಧಕೃಷ್ಣ ಬೋರ್ಕರ್ ಹಾಗೂ ಕರುಣಾಕರ ಅಜ್ಜಾವರ ಮಾಡಿದರು. ಬೆಮ್ಮರಗುಂಡ ಬೋರ್ಕರ್ ಮನೆತನದ ದಿವಾಕರ್ ಬೋರ್ಕರ್ , ರಾಧಾಕೃಷ್ಣ ಬೋರ್ಕರ್, ವೆಂಕಟರಮಣ ಬೋರ್ಕರ್ ಹಾಗೂ ವಿಜಯ್ ವಿಕ್ರಂ ಗಾಂಧಿಪೇಟೆ, ಕರುಣಾಕರ ಅಜ್ಜಾವರ, ಶೇಖರ್ ಮಾಡಾವು, ಇವರ ಉಸ್ತುವಾರಿಯಲ್ಲಿ ವಿವಿಧ ರಾಜ್ಯ, ಜಿಲ್ಲಾ, ತಾಲೂಕು ಮೊಗೇರ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.

 

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ