ಜಮ್ಮು-ಕಾಶ್ಮೀರ: ಇಂದು ಕೊನೆಯ ಹಂತದ ಮತದಾನ:
ಜಮ್ಮು-ಕಾಶ್ಮೀರ: ಇಂದು ಕೊನೆಯ ಹಂತದ ಮತದಾನ:
ಜಮ್ಮು- ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಕೊನೆಯ ಹಂತದ ಮತದಾನ ನಡೆಯುತ್ತಿದೆ. ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ 39 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂದು ಅಂತಿಮ ಹಂತದ ಮತದಾನ ನಡೆಯುತ್ತಿದೆ, ಅಂತಿಮ ಹಂತದ ಮತದಾನವು 415 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಬಿಗಿ ಭದ್ರತೆ ನಡುವೆ ಜಮ್ಮು ಪ್ರದೇಶದ 24 ಮತ್ತು ಕಾಶ್ಮೀರ ಕಣಿವೆ 16 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 7 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಚುನಾವಣಾ ಆಯೋಗ ಜಮ್ಮು- ಕಾಶ್ಮೀರದಾದ್ಯಂತ 5060 ಮತಗಟ್ಟೆಗಳನ್ನು ಸ್ಥಾಪಿಸಿದೆ.