ಪುತ್ತೂರು: 302 ವರ್ಷಗಳಷ್ಟು ಹಳೆಯ ಕನ್ನಡ ಶಿಲಾ ಶಾಸನ ಪತ್ತೆ..!
ಪುತ್ತೂರು: 302 ವರ್ಷಗಳಷ್ಟು ಹಳೆಯ ಕನ್ನಡ ಶಿಲಾ ಶಾಸನ ಪತ್ತೆ..!
ಪುತ್ತೂರು: ಸುಮಾರು 302 ವರ್ಷಗಳಷ್ಟು ಹಳೆಯ ಕನ್ನಡ ಶಿಲಾ ಶಾಸನವೊಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಪತ್ತೆಯಾಗಿದೆ. ಆ ಶಾಸನದಲ್ಲಿ ಬರೆದ ಸಾಲುಗಳು 17ನೇ ಶತಮಾನದ ಕಥೆಗಳನ್ನು ಹೇಳುತ್ತಿವೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ- ಶೋಧನ- ಅಧ್ಯಯನ- ಸಂರಕ್ಷಣಾ’ ಯೋಜನೆಯಡಿ ನಡೆದ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಈ ಪುರಾತನ ಕನ್ನಡ ಶಾಸನ ಲಭ್ಯವಾಗಿದೆ.
ಸಂಶೋಧಕರಾದ ಡಾ.ಉಮಾನಾಥ ಶೆಣೈ ಅವರ ನೇತೃತ್ವದಲ್ಲಿ ಯುವ ಅಧ್ಯಾಯನಕಾರರದ ಶ್ರೀಶಾವಾಸವಿ( ವಿದ್ಯಾಶ್ರೀ ಎಸ್) ತುಳುನಾಡು ಸಹಕಾರದೊಂದಿಗೆ ಅಧ್ಯಯನ ಮಾಡಲಾಯಿತು ಎಂದು ವರದಿ ಯಾಗಿದೆ.