• 7 ಡಿಸೆಂಬರ್ 2024

ಸ್ವದೇಶೀ ವಸ್ತುಗಳ ಬಳಕೆಯೊಂದಿಗೆ ಸ್ವಚ್ಛತೆಯಡೆಗೆ ಒಂದು ಹೆಜ್ಜೆ ಇಟ್ಟು ಭವ್ಯ ಭಾರತಕ್ಕೊಂದು ಕೊಡುಗೆ ನೀಡೋಣ…. ಶಾಸಕಿ ಭಾಗೀರಥಿ ಮುರುಳ್ಯ

 ಸ್ವದೇಶೀ ವಸ್ತುಗಳ ಬಳಕೆಯೊಂದಿಗೆ ಸ್ವಚ್ಛತೆಯಡೆಗೆ ಒಂದು ಹೆಜ್ಜೆ ಇಟ್ಟು ಭವ್ಯ ಭಾರತಕ್ಕೊಂದು ಕೊಡುಗೆ ನೀಡೋಣ…. ಶಾಸಕಿ ಭಾಗೀರಥಿ ಮುರುಳ್ಯ
Digiqole Ad

ಸ್ವದೇಶೀ ವಸ್ತುಗಳ ಬಳಕೆಯೊಂದಿಗೆ ಸ್ವಚ್ಛತೆಯಡೆಗೆ ಒಂದು ಹೆಜ್ಜೆ ಇಟ್ಟು ಭವ್ಯ ಭಾರತಕ್ಕೊಂದು ಕೊಡುಗೆ ನೀಡೋಣ…. ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಕೊಯಿಲ ಮಹಾಶಕ್ತಿ ಕೇಂದ್ರದ ಅತೂರು ಸಿ. ಎ ಬ್ಯಾಂಕ್ ಸಭಾಂಗಣದಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ನಡೆದ
ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು.

ಅತೂರು ಪ್ರಾಥಮಿಕ ಅರೋಗ್ಯ ಕೇಂದ್ರದ ಸ್ವಚ್ಛತೆ ಮತ್ತು ಹಿರಿಯ ಮಹಿಳಾ ಕಾರ್ಯಕರ್ತೆಯರಿರ್ವರಿಗೆ ಖಾದಿ ವಸ್ತ್ರ ನೀಡಿ ಗೌರವ ಅರ್ಪಣೆ ಮಾಡಲಾಯಿತು.

ಮಂಡಲಾಧ್ಯಕ್ಷರಾದ ವೆಂಕಟ್ ವಳಲಂಬೆ ಮಾತನಾಡಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರ ಗೊಳಿಸೋಣ ಎಂದರು.
ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಖಿತಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಪ್ರಭಾರಿ ಯಶಸ್ವಿನಿ ಶಾಸ್ತ್ರಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು..

ಕಾರ್ಯಕ್ರಮದಲ್ಲಿ ಪಕ್ಷದ ಅನ್ಯಾನ್ಯ ಜವಾಬ್ದಾರಿಯ ಪ್ರಮುಖರು ಭಾಗವಹಿಸಿದ್ದರು.
ಮಹಿಳಾ ಮೋರ್ಚಾ ಕಾರ್ಯದರ್ಶಿ ಹೇಮಾ ಮೋಹನ್ ದಾಸ್ ಸ್ವಾಗತಿಸಿ
ಮಂಡಲ ಕಾರ್ಯದರ್ಶಿ ತೇಜಸ್ವಿನಿ ಕಟ್ಟಪುಣಿ ಕಾರ್ಯಕ್ರಮ ನಿರೂಪಿಸಿ, ಜಯಂತಿ ಆರ್ ಗೌಡ ಧನ್ಯವಾದ ನೀಡಿದರು.

Digiqole Ad

ಈ ಸುದ್ದಿಗಳನ್ನೂ ಓದಿ