• 24 ಮಾರ್ಚ್ 2025

ಸವಣೂರು ವಿಶ್ವ ಹಿರಿಯರ ದಿನಾಚರಣೆ ಮತ್ತು ನಾಟಿ ವೈದ್ಯರಾದ ವಾಸುದೇವ ಇಡ್ಯಾಡಿಯವರಿಗೆ ಗೌರವಾರ್ಪಣೆ :

 ಸವಣೂರು ವಿಶ್ವ ಹಿರಿಯರ ದಿನಾಚರಣೆ ಮತ್ತು ನಾಟಿ ವೈದ್ಯರಾದ ವಾಸುದೇವ ಇಡ್ಯಾಡಿಯವರಿಗೆ ಗೌರವಾರ್ಪಣೆ :
Digiqole Ad

ಸವಣೂರು ವಿಶ್ವ ಹಿರಿಯರ ದಿನಾಚರಣೆ ಮತ್ತು ನಾಟಿ ವೈದ್ಯರಾದ ವಾಸುದೇವ ಇಡ್ಯಾಡಿಯವರಿಗೆ ಗೌರವಾರ್ಪಣೆ :

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಕಡಬ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕಡಬ
ಪ್ರಗತಿಬಂಧು ಸ್ವಸಹಾಯ ಸಂಘಗಳು ಒಕ್ಕೂಟ ಸವಣೂರು ವಲಯ
ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಹಿರಿಯರ ದಿನಾಚರಣೆ ಮತ್ತು ನಾಟಿವೈದ್ಯ ಶ್ರೀ ವಾಸುದೇವ ಇಡ್ಯಾಡಿಯವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ
ಪ್ರಸಾದ್ ನಿಲಯ ಇಡ್ಯಾಡಿ ಇಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಮಹೇಶ್ ಕೆ ಸವಣೂರು ವಕೀಲರು ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕಡಬ ವಹಿಸಿಕೊಂಡಿದ್ದರು.


ರೋಗಿಗಳ ಪಾಲಿಗೆ ಮರುಜನ್ಮ ನೀಡಿ ನಾಟಿ ವೈದ್ಯರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ವಾಸುದೇವ ಇಡ್ಯಾಡಿ ಹಾಗೂ ಧರ್ಮಪತ್ನಿ ಶ್ರೀಮತಿ ಮಹಾಲಕ್ಷ್ಮಿ ಇಡ್ಯಾಡಿ ಇವರಿಗೆ ಎಲ್ಲಾ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಕಡಬ ಇದರ ಯೋಜನೆ ಅಧಿಕಾರಿಗಳಾದ ಶ್ರೀ ಮೇದಪ್ಪ ಗೌಡ ನಾವೂರು ಇವರು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.
ಸನ್ಮಾನವನ್ನು ಸ್ವೀಕರಿಸಿದಂತಹ ಶ್ರೀ ವಾಸುದೇವ ಇಡ್ಯಾಡಿ ಮಾತನಾಡಿ ದೈವ ದೇವರ ಹಾಗೂ ಗುರು ಹಿರಿಯರ ಆಶೀರ್ವಾದದಿಂದ, ಅನುಗ್ರಹದಿಂದ ಈ ಸೇವೆ ಮಾಡುವ ಯೋಗ ಕರುಣಿಸಿದ್ದಾರೆ, ಹಲವು ಗುಣಪಡಿಸಲಾಗದ ರೋಗಗಳಿಗೂ ನಾಟಿ ಮದ್ದು ನೀಡಿ ರೋಗಿಗಳನ್ನು ಗುಣಪಡಿಸಿದ ತೃಪ್ತಿ ನನಗಿದೆ ಎಂದರು.


ಈ ಸಂಧರ್ಭದಲ್ಲಿ ಪೂರ್ಣ ಸಹಕಾರ ನೀಡುತ್ತಿರುವ ತನ್ನ ಮನೆಯ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಲವು ಸಂಘಸಂಸ್ಥೆಗಳ ಮಾರ್ಗದರ್ಶಕರು, ಸಮಾಜಮುಖಿ ಕಾರ್ಯಮಾಡುತ್ತಿರುವ ಶ್ರೀ ಗಿರಿಶಂಕರ್ ಸುಲಾಯ ಇವರ ಹುಟ್ಟುಹಬ್ಬವನ್ನು ಇದೇ ವೇದಿಕೆಯಲ್ಲಿ ಆಚರಿಸಲಾಯಿತು. ಶ್ರೀ ಮಹೇಶ್ ಸವಣೂರು ಇವರು ಶಾಲು ಮತ್ತು ನೆನಪಿನ ಕಾಣಿಕೆ ನೀಡಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಕೇಶ್ ರೈ ಕೆಡೆಂಜಿ, ಟ್ರಸ್ಟಿ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ (ರಿ.) ಸುಳ್ಯ, ಶ್ರೀ ದಿನೇಶ್ ಮೆದು ಮಾಜಿ ಅಧ್ಯಕ್ಷರು ಎಪಿಎಂಸಿ ಪುತ್ತೂರು, ಶ್ರೀ ಗಿರಿಶಂಕರ ಸುಲಾಯ ಅಧ್ಯಕ್ಷರು ಸಮರ್ಥ ಜನ ಸೇವ ಟ್ರಸ್ಟ್ (ರಿ.) ಪುಣ್ಚಪ್ಪಾಡಿ, ಶ್ರೀ ಕೃಷ್ಣಭಟ್ ಕುಕ್ಕುಜೆ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಸವಣೂರು, ಶ್ರೀ ತಾರಾನಾಥ ಕಾಯರ್ಗ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಸವಣೂರು, ಶ್ರೀ ಉಮಾಪ್ರಸಾದ್ ರೈ ನಡುಬೈಲು ಪತ್ರಕರ್ತರು ಸುದ್ದಿ ಬಿಡುಗಡೆ ಪುತ್ತೂರು, ಶ್ರೀ ಗಂಗಾಧರ ಪೆರಿಯಡ್ಕ ನಿರ್ದೇಶಕರು ಪ್ರಾ.ಕೃ.ಪಂ.ಸ.ಸಂ.ನಿ.ಸವನೂರು, ಶ್ರೀ ಮೋನಪ್ಪ ಗೌಡ ಪರಣೆ ಅಧ್ಯಕ್ಷರು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸವಣೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅತಿಥಿಗಳನ್ನು ಶ್ರೀಧರ ಇಡ್ಯಾಡಿ, ಕುಲದೀಪ್ ಸವಣೂರು, ರಾಜೇಂದ್ರ ಪ್ರಸಾದ್ ಇಡ್ಯಾಡಿ, ಶ್ರೀಮತಿ ಮೌಲ್ಯ ಪ್ರಸಾದ್ ಇಡ್ಯಾಡಿ, ಶ್ರೀಮತಿ ತೀರ್ಥ, ಶ್ರೀ ಅಭಿಷೇಕ್ ಇವರು ಹೂಗುಚ್ಚ ನೀಡಿ ಗೌರವಿಸಿದರು.
ಶ್ರೀಮತಿ ವೀಣಾ ಕೆ. ಸ್ವಾಗತಿಸಿದರು, ಶ್ರೀ ಆನಂದ ಇಡ್ಯಾಡಿ ಪ್ರಾರ್ಥಿಸಿದರು, ಶ್ರೀಮತಿ ಪ್ರೇಮ ಆರೆಲ್ತಾಡಿ ಸನ್ಮಾನ ಪತ್ರ ಓದಿದದರು, ಮೀನಾಕ್ಷಿ ಸವಣೂರು ಧನ್ಯವಾದಗೈದರು, ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ