• 2 ನವೆಂಬರ್ 2024

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

 ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!
Digiqole Ad

ಗರುಡ ಫ್ರೆಂಡ್ಸ್: ಪೊಳಲಿ ಹುಲಿ ತಂಡಕ್ಕೆ ಬಾಲಕನೇ ನಾಯಕ!

ಬಂಟ್ವಾಳ: ಹುಲಿ ವೇಷದ ತಾಸೆಯ ಪೆಟ್ಟು ಕೇಳಿದರೆ ಸಾಕು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒಂದೆರಡು ಸ್ಟೆಪ್‌ ಹಾಕಬೇಕು ಎಂಬಷ್ಟು ನಮ್ಮಲ್ಲಿ ಹುಚ್ಚು ಹಿಡಿಸುತ್ತದೆ. ನವರಾತ್ರಿ ಸಂದರ್ಭ ಸಾಕಷ್ಟು ಹುಲಿ ತಂಡಗಳು ಪ್ರದರ್ಶನ ನೀಡುತ್ತವೆ. ಇದಕ್ಕೆ ಅನುಭವಿಗಳೇ ಸಾರಥಿಗಳು. ಆದರೆ ಪೊಳಲಿಯಲ್ಲಿ 17 ವರ್ಷದ ಬಾಲಕನೋರ್ವ ಸ್ನೇಹಿತರನ್ನು ಕೂಡಿಕೊಂಡು ಹುಲಿವೇಷ ತಂಡ ಕಟ್ಟಿದ್ದಾನೆ. ಅದರ 2ನೇ ವರ್ಷದ ತಿರುಗಾಟಕ್ಕೆ ಈಗ ವೇದಿಕೆ ಅಣಿಯಾಗಿದೆ!
ಪೊಳಲಿಯ ಗೋಪಾಲ ದೇವಾಡಿಗ ಅವರ ಪುತ್ರ ತನ್ವಿತ್‌ ಅವರು ಗರುಡ ಫ್ರೆಂಡ್ಸ್‌ ಪೊಳಲಿ ಎಂಬ ಹೆಸರಿನಲ್ಲಿ ಹುಲಿ ತಂಡವನ್ನು
ಮುನ್ನಡೆಸುತ್ತಿದ್ದಾನೆ. ಕಳೆದ ವರ್ಷ 2 ದಿನಗಳ ಯಶಸ್ವಿ ಹುಲಿ ಕುಣಿತ ನಡೆದಿದ್ದು, ಈ ಬಾರಿಯೂ ಅ. 10 ಹಾಗೂ 11ರಂದು ತಮ್ಮ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಪೊಳಲಿ ದೇವಾಲಯದಲ್ಲಿ ಪ್ರಾರ್ಥಿಸಿ ಅ. 9ರಂದು ರಾತ್ರಿ ಊದು ಪೂಜೆ ನಡೆದು 11ರ ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದಾರೆ.


ಈ ಬಾರಿ ಡಬಲ್‌ ಹುಲಿಗಳು.!
ಕಳೆದ ವರ್ಷ ಸುಮಾರು 15 ಮಂದಿ ಹುಲಿ ವೇಷ ಹಾಕಿದ್ದು, ತನ್ವಿತ್‌ನ ತಮ್ಮ ಮನ್ವಿತ್‌ ಸೇರಿ ಇಬ್ಬರು ಪಲ್ಟಿ ಹೊಡೆಯುವ ಸಾಹಸಿಗಳಿದ್ದರು. ಆದರೆ ಈ ಬಾರಿ 30 ಮಂದಿ ಹುಲಿ ವೇಷಧಾರಿಗಳಿದ್ದು, 10 ಮಂದಿ ಪಲ್ಟಿ ಹೊಡೆಯುವವರಿದ್ದಾರೆ! ಈಗಾಗಲೇ
ಮೂರು ರವಿವಾರಗಳಲ್ಲಿ ಅಭ್ಯಾಸವನ್ನು ಪೂರ್ತಿಗೊಳಿಸಿ ಮುಂದೆ ನವರಾತ್ರಿ ಎರಡು ದಿನಗಳಲ್ಲಿ ಸುಮಾರು 100 ಮನೆಗಳನ್ನು
ಸಂಪರ್ಕಿಸುವ ಟಾರ್ಗೆಟ್‌ ಹೊಂದಿದ್ದಾರೆ.
ಹುಲಿಗಳ ತಲೆ ತಯಾರಿಸುವ ತನ್ವಿತ್‌
ಸಾಮಾನ್ಯವಾಗಿ ಹುಲಿ ತಂಡದವರು ಹುಲಿಯ ತಲೆಯನ್ನು ಬಾಡಿಗೆಗೆ ಪಡೆದು ಪ್ರದರ್ಶನ ನೀಡುತ್ತಾರೆ. ಇದಕ್ಕೆ 15 ಸಾವಿರದಷ್ಟು
ಬಾಡಿಗೆ ಇರುತ್ತದೆ. ಈ ಮಕ್ಕಳ ಟೀಮ್‌ನಲ್ಲಿ ಅಷ್ಟು ಹಣವಿಲ್ಲದೆ ಇರುವುದರಿಂದ ತನ್ವಿತ್‌ ತಾನೇ ತಲೆಗಳನ್ನು ತಯಾರಿಸಿದ್ದಾನೆ. ಒಂದು ತಲೆ ಸಿದ್ಧಗೊಳ್ಳಬೇಕಾದರೆ ಮೂರ್ನಾಲ್ಕು ದಿನಗಳ ಕೆಲಸವಿದೆ.ಈಗಾಗಲೇ ಬೇಕಾದಷ್ಟು ಹುಲಿಗಳ ತಲೆಗಳು ಸಿದ್ಧಗೊಂಡಿವೆ!
ಈ ಬಾರಿಸುಮಾರು 100 ಮನೆಗೆ ಹೋಗುತ್ತೇವೆ
ಸುಮಾರು 30 ಮಂದಿ ಹುಲಿ ವೇಷಧಾರಿಗಳ ತಂಡ ಈ ಬಾರಿ 2 ದಿನಗಳ ಹುಲಿ ಕುಣಿತ ಪ್ರದರ್ಶನ ನೀಡಲಿದ್ದು, ಈಗಾಗಲೇ ಪ್ರಾಕ್ಟಿಸ್‌ ಪೂರ್ತಿಗೊಳಿಸಿದ್ದೇವೆ. ಪೊಳಲಿ ಸುತ್ತಮುತ್ತಲ ಸುಮಾರು 100 ಮನೆಗಳಿಗೆ ಭೇಟಿ ನೀಡಿ ಅ. 11ರಂದು ರಾತ್ರಿ ಪೊಳಲಿಯಲ್ಲಿ ಸ್ಟೇಜ್‌ ಪ್ರದರ್ಶನ ನೀಡಲಿದ್ದೇವೆ ಇದು 2ನೇ ವರ್ಷದ ಹುಲಿ ಹುಣಿತವಾಗಿದ್ದು, 2022ರಲ್ಲಿ ಕರಡಿ ವೇಷದ ತಂಡವನ್ನು ಇಳಿಸಿದ್ದೆ ಎನ್ನುತ್ತಾರೆ ತನ್ವೀತ್.

Digiqole Ad

ಈ ಸುದ್ದಿಗಳನ್ನೂ ಓದಿ