• 19 ಜನವರಿ 2025

ದಾರಂದ ಬಿದ್ದು ಬಾಲಕಿ ಸಾವು:

 ದಾರಂದ ಬಿದ್ದು ಬಾಲಕಿ ಸಾವು:
Digiqole Ad

ದಾರಂದ ಬಿದ್ದು ಬಾಲಕಿ ಸಾವು:

ಮಡಂತ್ಯಾರು: ಹೊಸ ಮನೆಗೆ ಅಳವಡಿಸಲು ತಂದಿರಿಸಲಾಗಿದ್ದ ದಾರಂದ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆಯಲ್ಲಿ ಸಂಭವಿಸಿದೆ.
ಕೊನಲೆ ನಿವಾಸಿ ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿಯ ಪುತ್ರಿ ಅಲ್ಫಿಯಾ ಮೃತ ಬಾಲಕಿ. ಕೇರ್ಯಾ ಸರಕಾರಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಅಲ್ಫಿಯಾ ಕಲಿಯುತ್ತಿದ್ದಳು.

ಮೃತ ಬಾಲಕಿಯ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಗುರುವಾರ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ತಂದಿರಿಸಿದ್ದರು. ಈ ವೇಳೆ ಬಾಲಕಿ ಆಟವಾಡುತ್ತಿದ್ದಾಗ ದಾರಂದ ಆಕೆಯ ತಲೆಗೆ ಬಿತ್ತು ಗಂಭೀರ ಗಾಯವಾಗಿತ್ತು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.

Digiqole Ad

ಈ ಸುದ್ದಿಗಳನ್ನೂ ಓದಿ