ಕಂದಕದ ಒಳಗೆ ಬಿದ್ದು ಆನೆ ಮೃತ್ಯು:
ಕಂದಕದ ಒಳಗೆ ಬಿದ್ದು ಆನೆ ಮೃತ್ಯು:
ಚಾಮರಾಜನಗರ: ಆನೆಯೊಂದು ಕಂದಕದ ಒಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯಲ್ಲಿ ನಡೆದಿದೆ. 25-30 ವರ್ಷದೊಳಗಿನ ಗಂಡಾನೆಯು ಹೊಸಪುರ ಕಾಡಂಚಿನಲ್ಲಿ ಅರಣ್ಮ ಇಲಾಖೆಯು ತೆಗೆದಿದ್ದ ಕಂದಕಕ್ಕೆ ಬಿದ್ದು ಮೃತಪಟ್ಟಿದೆ. ಜಮೀನುಗಳಿಗೆ ಹೋಗುವಾಗ ಆನೆ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವುದು ಎಂದು ತಿಳಿದುಬಂದಿದೆ. ಆನೆಯ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವೈದ್ಯರ ತಪಾಸನೆ ಬಳಿಕ ತಿಳಿಯಲಿದೆ ಎಂದು ವಲಯ ಅರಣ್ಯ ಅಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಸೋಲಾರ್ ತಂತಿಯಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಕಂದಕದ ಒಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.