ಬಿಜೆಪಿ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಬಿಜೆಪಿ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಬಿಜೆಪಿ ಸುಳ್ಯ ಮಂಡಲ ಕುಟ್ರುಪ್ಪಾಡಿ ಮಹಾ ಶಕ್ತಿ ಕೇಂದ್ರದ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಬಿಜೆಪಿಯ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 2, ಬುಧವಾರದಂದು ಗಾಂಧಿ ಜಯಂತಿಯ ಪ್ರಯುಕ್ತ ಹಿಂದೂ ರುದ್ರ ಭೂಮಿ ಕನಡಕುಮೇರು ಸವಣೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಸುಳ್ಯ ಮಂಡಲ ಸಮಿತಿಯ ಸದಸ್ಯರಾದ ತಾರಾನಾಥ ಕಾಯರ್ಗ, ಸುಳ್ಯ ಮಂಡಲ ಎಸ್. ಟಿ. ಮೋರ್ಚಾ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ, ಸವಣೂರು ಶಕ್ತಿ ಕೇಂದ್ರ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲು ಮಂಡಲ ಮಹಿಳಾ ಮೋರ್ಚಾ ಸದಸ್ಯರಾದ ಚಂದ್ರಾವತಿ ಸುಣ್ಣಾಜೆ, ಸವಣೂರು ಬಿಜೆಪಿ ಬೂತ್ ಸಂಖ್ಯೆ 65 ರ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿ ,ಪ್ರಧಾನ ಕಾರ್ಯದರ್ಶಿ ಸತೀಶ್ ಬಲ್ಯಾಯ,ಬೂತ್ 66ರ ಪ್ರಧಾನ ಕಾರ್ಯದರ್ಶಿ ಹಿತೇಶ್ ಮೆದು, ಪಾಲ್ತಾಡಿ ಬೂತ್ ಸಂಖ್ಯೆ 70 ರ ಅಧ್ಯಕ್ಷರಾದ ಸತೀಶ್ ಅಂಗಡಿಮೂಲೆ, ಸವಣೂರು ಯುವಕ ಮಂಡಲದ ಅಧ್ಯಕ್ಷರಾದ ಜಿತಾಕ್ಷ. ಜಿ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ,ಮಾಜಿ ಅಧ್ಯಕ್ಷರಾದ ದಯಾನಂದ ಮೆದು ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದ ಕರೆಗೆ ಸಾಥ್ ನೀಡಿದರು.