ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ :
ಡಾ| ಸಂಧ್ಯಾ ಶೆಣೈಗೆ ಕಲ್ಪನಾ ಚಾವ್ಲಾ ಯುವವಿಜ್ಞಾನಿ ಪ್ರಶಸ್ತಿ :
ರಾಜ್ಯ ಸರಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ನೀಡಲಾಗುವ ಪ್ರತಿಷ್ಠಿತ ಡಾ| ಕಲ್ಪನಾ ಚಾವ್ಹಾ ಯುವ ವಿಜ್ಞಾನಿ ಪ್ರಶಸ್ತಿಯನ್ನು ಮುಕ್ಕ ಶ್ರೀನಿವಾಸ್ ವಿವಿಯ ಸಂಶೋಧನ ವಿಜ್ಞಾನಿ ಡಾ| ಸಂಧ್ಯಾ ಶೆಣೈ ಪಡೆದುಕೊಂಡಿದ್ದಾರೆ
ಶ್ರೀನಿವಾಸ್ ವಿವಿಯ ವಸ್ತುವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಯಾಗಿರುವ ಅವರು ಸೆ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ವಿಜ್ಞಾನಿ ಪ್ರೊ| ಸಿ.ಎನ್.ಆರ್. ರಾವ್, ಸಚಿವ ಎನ್.ಎಸ್.ಬೋಸರಾಜು ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಮತ್ತು 1 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ.
ಡಾ| ಸಂಧ್ಯಾ ಅವರು ಥರ್ಮೋಎಲೆಕ್ಟ್ರಿಕಲ್ಸ್ ಕ್ಷೇತ್ರಕ್ಕೆ ಅವರ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಪಡೆದರು. ಎರಡು ವರ್ಷಗಳಲ್ಲಿನ ಅವರ ಪ್ರಭಾವಶಾಲಿ ಸಂಶೋಧನ ಕಾರ್ಯದ ಆಧಾರದ ಮೇಲೆ ಸ್ಕ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಪ್ರಕಟಿಸಿದ ವಿಶ್ವದ ಅಗ್ರ ಶೇ. 2 ವಿಜ್ಞಾನಿಗಳ ಪ್ರತಿಷ್ಠಿತ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಅವರ ಸಾಧನೆಯನ್ನು ಶ್ರೀನಿವಾಸ್ ವಿವಿ ಕುಲಪತಿ ಡಾ| ಸಿಎ ಎ. ರಾಘವೇಂದ್ರ ರಾವ್, ಸಹಕುಲಪತಿ ಡಾ| ಎ. ಶ್ರೀನಿವಾಸ್ ರಾವ್ ಶ್ಲಾಘಿಸಿದ್ದಾರೆ.