ಕಡಬ ತಾಲೂಕು ಒಕ್ಕೂಟ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮ
ಕಡಬ ತಾಲೂಕು ಒಕ್ಕೂಟ ಪಧಾದಿಕಾರಿಗಳ ಸಮಾವೇಶ ಕಾರ್ಯಕ್ರಮ
ಸವಾಲುಗಳಿದ್ದಲ್ಲಿ ಸಾಧನೆ ಸಾಧ್ಯ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆಗೌಡ ಅಭಿಪ್ರಾಯ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಒಕ್ಕೂಟದ ಪಧಾದಿಕಾರಿಗಳ ಸಮಾವೇಶ ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಉಡುಪಿ ಪ್ರಾದೇಶಿಕ ಕಛೇರಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ ರವರು ಮಾತನಾಡಿ ಸೇವಾ ಮನೋಭಾವನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಡಬ ತಾಲೂಕಿನ ಒಕ್ಕೂಟಗಳ ಅಧ್ಯಕ್ಷರುಗಳು, ಪಧಾದಿಕಾರಿಗಳು, ಉಪಸಮಿತಿ ಸದಸ್ಯರುಗಳು ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶಯದ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸೇವಾ ಮನೊಭಾವನೆಯಿಂದ ಒಕ್ಕೂಟದ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅನುಷ್ಟಾನಿಸಿರುವುದು ಶ್ಲಾಘನೀಯ
ನಿಮ್ಮೆಲ್ಲರ ಪ್ರಯತ್ನದಿಂದ ಕರಾವಳಿ ಪ್ರಾದೇಶಿಕ ಕಛೇರಿಯು ರಾಜ್ಯದಲ್ಲಿಯೇ ಗುರುತಿಸುವ ಚಾಂಪಿಯನ್ ಆಪ್ ದಿ ಚಾಂಪ್ಯನ್ ಪ್ರಶಸ್ತಿಯನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರಿಂದ ಪಡೆದುಕೊಳ್ಳುವಲ್ಲಿ ಸಹಕಾರಿ ಯಾಗಿದೆ.
ಉತ್ತಮ ಕೆಲಸಗಳನ್ನು ಮಾಡುವಾಗ ಒಂದಷ್ಟು ಅಪಸ್ವರಗಳು, ವಿರೋಧಗಳು ಬರಬಹುದು .ಅದನ್ನೆಲ್ಲಾ ಮೆಟ್ಟಿನಿಂತು ಸಾಧನೆ ಮಾಡಿದರೆ ಮಾತ್ರ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಕಾನೂನು ಬದ್ದವಾಗಿ ಬ್ಯಾಂಕ್ ನ ಸಹಬಾಗಿತ್ವದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ವ್ಯಾವಹಾರಿಕವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಗೊಂದಲಗಳು ಬೇಡ.ಸ್ವಸಹಾಯ ಸಂಘಗಳ ಆರ್ಥಿಕ ನಿರ್ವಹಣೆಯು ಬ್ಯಾಂಕ್ ನ ನಿಯಮಗಳಿಗೆ ಬದ್ದವಾಗಿಯೇ ನಡೆಯುತ್ತದೆ. ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ,ಕ್ಷೇತ್ರದ ಮಂಜುನಾಥಸ್ವಾಮಿಗೆ ಬದ್ದವಾಗಿ ಕೆಲಸ ನಿರ್ವಹಿಸಿದಲ್ಲಿ ಸ್ವಾಮಿಯ ಅನುಗ್ರಹ ಪ್ರತೀ ಕುಟುಂಬಕ್ಕೆ ಶಕ್ತಿಯನ್ನು ನೀಡುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸಮರ್ಥ ಜನಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗಿರಿಶಂಕರ್ ಸುಲಾಯ ರವರು ಗ್ರಾಮಾಭಿವೃಧ್ಧಿ ಯೋಜನೆಯಿಂದ ಕಡಬ ತಾಲೂಕಿನ ಸಮುದಾಯಕ್ಕೆ ಹಾಗೂ ಜನರಿಗೆ ಆಗಿರುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.
ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕ್ ನ ನೆಲ್ಲಿಕಟ್ಟೆ ಬ್ರಾಂಚ್ ಮುಖ್ಯ ವ್ಯವಸ್ಥಾಪಕರಾದ ಭವಾನಿ ಯವರು ಬ್ಯಾಂಕಿನ ಸೌಲಭ್ಯಗಳನ್ನು ಜನಸಾಮಾನ್ಶರಿಗೆ ತಲುಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ ಸಿ ಟ್ರಸ್ಟ್ ನಿರ್ವಹಿಸುವ ಜವಾಬ್ದಾರಿಗಳು ಹಾಗೂ ಸಂಘದ ಸದಸ್ಶರಿಗೆ 13.5%ಕಡಿತ ದರದ ಕಡಿಮೆ ಬಡ್ಡಿಯಲ್ಲಿ ವ್ಯಕ್ತಿಯೊಬ್ಬರಿಗೆ 300000 ಲಕ್ಷದ ವರೆಗೆ ಸಾಲ ಪಡೆಯಲು ಸಹಕಾರಿಯಾಗಿರುವ ಬಗ್ಗೆ ತಿಳಿಸಿದರು.
ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಸಂಘದ ವ್ಯವಹಾರದಲ್ಲಿ ಪಾರದರ್ಶಕತೆ ˌಯೋಜನೆ ಹಾಗೂ ಬ್ಯಾಂಕ್ ನ ಸಹಬಾಗಿತ್ವದಲ್ಲಿ ಜನಸಾಮಾನ್ಯರಿಗೆ ಮನೆಬಾಗಿಲಿಗೆ ಕಡಿಮೆ ಅವಧಿಯಲ್ಲಿ ದೊರೆಯಲ್ಪಡುವ ಆರ್ಥಿಕ ನೆರವು ಹಾಗೂ ಸರಕಾರದ ಸೌಲಭ್ಯಗಳ ಒದಗಣೆಯಲ್ಲಿ ಸಿ ಎಸ್ ಸಿ ಕೇಂದ್ರ ಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ಯನ್ ಸ್ವಾಗತಿಸಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಕಡಬ ತಾಲೂಕು ಯೋಜನಾ ಕಛೇರಿ ಮೂಲಕ ಸಮುದಾಯಕ್ಕೆ ಸಿಕ್ಕಿರುವ ಅನುದಾನಗಳು ಹಾಗೂ ಸಂಘದ ಸದಸ್ಯರ ಕುಟುಂಬಗಳಿಗೆ ನೀಡಿರುವ ಸಹಾಯಧನದ ವಿವರವನ್ನು ನೀಡಿದರು.
ತಾಲೂಕು ಪ್ರಗತಿಬಂಧು ಒಕ್ಕೂಟ ಸಮಿತಿ ಅಧ್ಯಕ್ಷರಾದ ಸಂತೋಷ್ ಕೇನ್ಯ ಅಧ್ಶಕ್ಷತೆ ವಹಿಸಿದ್ದರು.
ತಾಲೂಕು ಜನಜಾಗೃತಿ ವೇಧಿಕೆ ಅಧ್ಯಕ್ಷ ಮಹೇಶ್ ಕೆ ಸವಣೂರು ,ಜನಜಾಗೃತಿ ಸದಸ್ಯ ಶಿವಪ್ರಸಾದ್ ರೈ ಮೈಲೇರಿ ˌ ಕಡಬ ಎಸ್ ಬಿ ಐ ಬ್ಶಾಂಕ್ ನ ವ್ಯವಸ್ಥಾಪಕರಾದ ಸಂದೀಪ್ ಸಿಂಗ್, ಜಿಲ್ಲಾ ಎಮ್ ಐ ಎಸ್ ಯೋಜನಾಧಿಕಾರಿ ಶಕುಂತಲಾ ಉಪಸ್ಥಿತರಿದ್ದರು.
ಕಡಬ ಒಕ್ಕೂಟದ ಅಧ್ಶಕ್ಷೆ ನಳಿನಿ ರೈ ಅನಿಸಿಕೆ ವ್ಶಕ್ತಪಡಿಸಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಧನ್ಶವಾದವಿತ್ತರು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ 62 ಒಕ್ಕೂಟದ ಅಧ್ಯಕ್ಷರುಗಳು ಪಧಾದಿಕಾರಿಗಳು ,ಉಪಸಮಿತಿ ಸದಸ್ಯರುಗಳು ,ಮೇಲ್ವೀಚಾರಕ ಶ್ರೇಣಿ ಸಿಬ್ಬಂದಿಗಳು ಸೇವಾಪ್ರತಿನಿಧಿಗಳು, ಸಿಎಸ್ ಸಿ ಸಿಬ್ಬಂದಿಗಳು ,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಯೋಜನ ಪಡೆದುಕೊಂಡರು.