ಅ.6 ರಂದು ಮಂಗಳೂರಿನಲ್ಲಿ ಹ್ಯಾಪ್ ಮ್ಯಾರಥಾನ್:
ಅ.6 ರಂದು ಮಂಗಳೂರಿನಲ್ಲಿ ಹ್ಯಾಪ್ ಮ್ಯಾರಥಾನ್:
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಜಿಯೂಸ್ ಫಿಟ್ನೆಸ್ ಕೇಂದ್ರ, ಖೇಲೋ ಇಂಡಿಯಾ ಮತ್ತು ಡೆಕತ್ಲಾನ್ ಸಹಯೋಗದಲ್ಲಿ ಅ.6 ರಂದು ಹ್ಯಾಪ್ ಮ್ಯಾರಥಾನ್ ಆಯೋಜಿಸಲಾಗಿದೆ.
‘ವನ್ ಸಿಟಿ: ವನ್ ಸ್ಪಿರಿಟಿ’ ಎಂಬ ಧ್ಯೇಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ವ್ಯಸನ ಮುಕ್ತವನ್ನಾಗಿಸುವ ಪ್ರಯತ್ನವಾಗಿ 21.ಕಿಮೀ., 10 ಕಿಮೀ., ಮತ್ತು 5.ಕಿಮೀ ಗಳ ಹ್ಯಾಪ್ ಮ್ಯಾರಥಾನ್ ನಡೆಯಲಿದೆ.
ವಿಜೇತರಿಗೆ ಪ್ರಥಮ 25000 ರೂ. ಮತ್ತು ದ್ವಿತೀಯ 15,000 ರೂ. ಬಹುಮಾನ ನೀಡಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್.ಆರ್ ಪೂಜಾರಿ ತಿಳಿಸಿದ್ದಾರೆ