ಮಂಗಳೂರು: ಅ.8 ರಂದು ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ:
ಮಂಗಳೂರು: ಅ.8 ರಂದು ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ:
ಮಂಗಳೂರು : ದಸರಾ ಬಹುಭಾಷಾ ಕವಿಗೋಷ್ಠಿಯು ಮಂಗಳೂರಿನ ಉರ್ವಾ ಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಅಕ್ಟೋಬರ್ 8ರಂದು ಅಪರಾಹ್ನ 3 ಗಂಟೆಗೆ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ಮೂರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯ 12 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ. ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ. ನಿಕೇತನ ಉಡುಪಿ ಅವರು ಕವಿಗೋಷ್ಠಿಯನ್ನು ಉದ್ಘಾಟಿಸುವರು. ಹಿರಿಯ ಸಾಹಿತಿ ಕಾಸರಗೋಡಿನ ರಾಧಾಕೃಷ್ಣ ಉಳಿಯತಡ್ಕ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ ಶೆಟ್ಟಿ ಮುಂಬೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಗೀತಾ ಜೈನ್(ತುಳು), ಪ್ರಮೀಳಾ ರಾಜ್ ಸುಳ್ಯ (ಕನ್ನಡ), ಚಂದ್ರಾವತಿ ಬಡ್ಡಡ್ಕ (ಅರೆ ಭಾಷೆ), ಬಾಬು ಕೊರಗ ಪಾಂಗಾಳ (ಕೊರಗ ಭಾಷೆ ), ಮಂಜುನಾಥ್ ಗುಂಡ್ಮಿ (ಕುಂದಾಪುರ ಕನ್ನಡ), ಜ್ಯೋತಿ ರವಿರಾಜ್(ಹವ್ಯಕ ಕನ್ನಡ), ಆಕೃತಿ ಭಟ್( ಶಿವಳ್ಳಿ ತುಳು), ಶರೀಫ್ ನೀರ್ಮುಂಜೆ (ಬ್ಯಾರಿ),ಡಾ. ಪ್ಲೇವಿಯಾ ಕ್ಯಾಸ್ಟಲಿನೋ( ಕೊಂಕಣಿ), ರಾಜನ್ ಮುನಿಯೂರು (ಮಲಯಾಳಂ ), ಸಿಯಾನ ಬಿ. ಎಂ(ಬ್ಯಾರಿ), ಫೆಲ್ಸಿ ಲೊಬೋ ದೇರೆಬೈಲ್( ಕೊಂಕಣಿ ), ಶರ್ಮಿಳ ಬಜಕೂಡ್ಲು( ಮರಾಠಿ), ಶ್ರೀನಿವಾಸ ಪೆರಿಕ್ಕಾನ( ಕರಾಡ ) ಅವರು ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.