ಟೊಮೆಟೊ ದರ ಏರಿಕೆ :
ಟೊಮೆಟೊ ದರ ಏರಿಕೆ :
ಬೆಂಗಳೂರು: ಬೆಳ್ಳುಳ್ಳಿ, ಈರುಳ್ಳಿ ಬಳಿಕ ಇದೀಗ ಟೊಮೆಟೊ ದರ ಭಾರೀ ಏರಿಕೆಯಾಗಿದೆ. ಕಳೆದ ವಾರ ಕೆಜಿ ಗೆ 40 ರೂ. ಇದ್ದ ದರ ಈಗ ಎರಡು ಪಟ್ಟು ಹೆಚ್ಚಳವಾಗಿದೆ.
ನಿನ್ನೆಯಿಂದ ಟೊಮೆಟೊ ದರ ಕೆಜಿ ಗೆ 80 ರೂ. ಆಗಿದೆ. ಮಳೆಯಿಂದ ಟೊಮೆಟೊ ಇಳುವರಿ ಕುಸಿತಗೊಂಡಿದ್ದು, ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಕಡಿಮೆ ಇರುವ ಕಾರಣ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತು ಬೆಳ್ಳುಳ್ಳಿ ದರ ಕೆಜಿ ಗೆ 500 ರೂ., ಈರುಳ್ಳಿ ದರ ಕೆಜಿ ಗೆ 70 ರೂ. ದಾಟಿದೆ.