• 17 ಫೆಬ್ರವರಿ 2025

ಪುತ್ತೂರಿನಲ್ಲಿ ಎರಡನೇ ವರ್ಷದ ಪಿಲಿ ಘರ್ಜನೆ :

 ಪುತ್ತೂರಿನಲ್ಲಿ ಎರಡನೇ ವರ್ಷದ ಪಿಲಿ ಘರ್ಜನೆ :
Digiqole Ad

ಪುತ್ತೂರಿನಲ್ಲಿ ಎರಡನೇ ವರ್ಷದ ಪಿಲಿ ಘರ್ಜನೆ :

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರನ ನೆಲದಲ್ಲಿ ಎರಡನೇ ವರ್ಷ ನಡೆದ ಪಿಲಿಗೊಬ್ಬುವಿನಲ್ಲಿ ಪಿಲಿಗಳ ನರ್ತನ ಪ್ರೇಕ್ಷಕರ ಮನಸೂರೆಗೊಳಿಸಿತು.
ವಿಜಯ ಸಾಮ್ರಾಟ್‌ ಆಶ್ರಯ ದಲ್ಲಿ ಎರಡು ದಿನಗಳ ಕಾಲ ನಡೆದ ಪಿಲಿಗೊಬ್ಬು ಹಾಗೂ ಫುಡ್‌ ಫೆಸ್ಟ್‌ಗೆ ಜನರ ದಂಡೇ ಹರಿದು ಬಂತು. ಜನರು ಒಂದೆಡೆ ಆಹಾರ ಮಳಿಗೆಯಲ್ಲಿನ ಬಗೆ-ಬಗೆಯ ತಿನಿಸುಗಳ ಸವಿ ಸವಿದರೆ, ಇನ್ನೊಂದೆಡೆ ಅದ್ದೂರಿ ವೇದಿಕೆಯಲ್ಲಿ ಗರ್ಜಿಸು ತ್ತಿದ್ದ ಪಿಲಿ ವೇಷಧಾರಿಗಳನ್ನು ಕಣ್ತುಂಬಿಸಿಕೊಂಡರು. ಮಧ್ಯಾಹ್ನದ ಅನಂತರ ವರುಣಾಗಮನದ ನಡುವೆಯು ಪ್ರೇಕ್ಷಕರ ಉತ್ಸಾಹಕ್ಕೇನೂ ಕ್ಕೇನೂ ಅಡ್ಡಿಯಾಗಲಿಲ್ಲ. ಸ್ವತ್ಛತೆಗೆ ವಿಶೇಷ ಗಮನ ನೀಡಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುನಿಲ್‌ ಆಚಾರ್‌, ಮಾಜಿ ಶಾಸಕ ಸಂಜೀವ ಮಠಂದೂರು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಜಿ.ಎಲ್‌.ಆಚಾರ್ಯ ಜುವೆಲ್ಸ್‌ನ ಮಾಲಕ ಬಲರಾಮ ಆಚಾರ್ಯ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ವಲಯ ಅರಣ್ಯಧಿಕಾರಿ ಕಿರಣ್‌ ಬಿ.ಎಂ., ಉದ್ಯಮಿ ಹರ್ಷ ಕುಮಾರ್‌ ರೈ, ನಗರಸಭೆ ಸದಸ್ಯ ರಮೇಶ್‌ ರೈ ಮೊಟ್ಟೆತ್ತಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌.ಬಿ. ಜಯರಾಮ ರೈ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್‌ ಜೈನ್‌, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪ್ರಮುಖರಾದ ಎ.ಕೆ. ಜಯರಾಮ ರೈ, ಅಶೋಕ್‌ ಶೆಣೈ, ಸಾಜ ರಾಧಾಕೃಷ್ಣ ಆಳ್ವ, ಸುಧೀರ್‌ ರೈ ನೇಸರಮ ಪಿಲಿಗೊಬ್ಬು ಸಮಿತಿ ಕಾರ್ಯಾಧ್ಯಕ್ಷ ಸುಜಿತ್‌ ರೈ ಪಾಲ್ತಾಡು, ಸಂಚಾಲಕ ನಾಗರಾಜ್‌ ನಡುವಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಶರತ್‌ ಆಳ್ವ, ಉಪಾಧ್ಯಕ್ಷರಾದ ಶಂಕರ ಭಟ್‌, ದೇವಿಪ್ರಸಾದ್‌ ಭಂಡಾರಿ ಮೊದಲಾದವರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ