• 3 ನವೆಂಬರ್ 2024

ಇಲ್ಲಿದೆ 👇’ವಿಂಡೊಸೀಟ್’ ಕಥೆಯ ಮೂಲ ತಿರುಳು :

 ಇಲ್ಲಿದೆ 👇’ವಿಂಡೊಸೀಟ್’ ಕಥೆಯ ಮೂಲ ತಿರುಳು :
Digiqole Ad

ಇಲ್ಲಿದೆ 👇’ವಿಂಡೊಸೀಟ್’ ಕಥೆಯ ಮೂಲ ತಿರುಳು :

ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ನಾನಿದ್ದ ಮನೆಯೇ ಸ್ಪೂರ್ತಿ ಎಂದ ಶೀತಲ್ ಶೆಟ್ಟಿ!

ಬೆಂಗಳೂರು ಆ.7: ಶೀತಲ್ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಕನ್ನಡದ ಖ್ಯಾತ ನ್ಯೂಸ್ ಚಾನೆಲ್ ಟಿವಿ 9 ರಲ್ಲಿ ತನ್ನ ಬಿನ್ನ ಶೈಲಿಯ ಆ್ಯಂಕರಿಂಗ್ ಮೂಲಕ ರಾಜ್ಯಾದ್ಯಂತ ಕ್ರೇಜ್ ಸೃಷ್ಟಿಸಿದವರು ಉಡುಪಿ ಮೂಲದ ಶೀತಲ್ ಶೆಟ್ಟಿ. ತನ್ನ ಚೊಚ್ಚಲ ನಿರ್ದೇಶನದ ಸಿನಿಮಾ ‘ವಿಂಡೊಸೀಟ್’ ಕಥೆಯ ಮೂಲ ಹುಟ್ಟಿನ ಬಗ್ಗೆ ಇದೀಗ ಹೇಳಿದ್ದಾರೆ.

‘ವಿಂಡೋಸೀಟ್’ ಸಿನಿಮಾದ ಕಥೆ
ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ, ಈ ಚಿತ್ರಕ್ಕೆ ಮೂಲ ಕಂಟೆಂಟ್ ದೊರಕಲು ತಾನಿದ್ದ ಮನೆಯೇ ಕಾರಣ ಎಂದು ಶೀತಲ್ ಶೆಟ್ಟಿ ಇದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಾವು ಬೆಂಗಳೂರಲ್ಲಿ ವಾಸವಿದ್ದ ಮನೆಯು ರೈಲ್ವೆ ಟ್ರ್ಯಾಕ್ ಗೆ ಹತ್ತಿರವಿದ್ದು, ಕಿಟಕಿ ಮೂಲಕ ರೈಲು ಹೊಗುವುದನ್ನ ಹತ್ತಿರದಿಂದ ಕಾಣಬಹುದಿತ್ತು. ಹೀಗೆ ಸಸ್ಪೆನ್ಸ್ ಕಥೆಯ ಬಗ್ಗೆ ಯೋಚಿಸುತ್ತಿರುವಾಗ, ಇದನ್ನೇ ಮೂಲವಾಗಿಟ್ಟುಕೊಂಡು ಕಥೆ ಹಣೆದರೆ ಹೇಗೆ ಎಂಬ ಅಲೋಚನೆಯಿಂದ ಬರೆಯಲು ಶುರುಮಾಡಿದೆ. ಅದುವೇ ಕೊನೆಗೆ ‘ವಿಂಡೊಸೀಟ್ ಸಿನಿಮಾ’ ಆಯ್ತು ಎಂದಿದ್ದಾರೆ.

ರೈಲಿನಲ್ಲಿ ವಿಂಡೊಸೀಟ್ ಪಕ್ಕ‌ ಕುಳಿತು ಪ್ರಯಾಣಿಸುತ್ತಿರುವಾಗ ತಾನು ಎಂದೂ ನೋಡುತ್ತಿದ್ದ ಹುಡುಗಿ, ಒಂದು ದಿನ ಕೊಲೆಯಾಗುವುದನ್ನು ಕಣ್ಣಾರೆ ಕಾಣುತ್ತಾನೆ ಚಿತ್ರದ ನಾಯಕ. ಮುಂದೇನಾಗುತ್ತೆ ಎಂಬುದೇ ಕತೆ‌ಯ ಸಾರ. ಇದೊಂದು ರೊಮ್ಯಾಂಟಿಕ್- ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂದು‌‌ ಹೇಳಬಹುದು

‘ವಿಂಡೋಸೀಟ್’ ಸಿನಿಮಾ 2022ರಲ್ಲಿ ಬಿಡುಗಡೆಯಾಗಿ‌ ಜನರ‌ ಮೆಚ್ಚುಗೆಯನ್ನು ಪಡೆದಿತ್ತು. ತನ್ನ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿಯೇ ಕೈಚಳಕ ತೋರಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದರು ಶೀತಲ್ ಶೆಟ್ಟಿ. ಈ ಚಿತ್ರಕ್ಕೆ ಐ.ಎಮ್.ಡಿ.ಬಿ. 6.3 ರೇಟಿಂಗ್ ಕೂಡ‌ ಕೊಟ್ಟಿದೆ. ‘ವಿಂಡೊಸೀಟ್’ ಸಿನಿಮಾ ಈಗ ಜೀ 5 ಒಟಿಟಿ ಫ್ಲಾಟ್ ಪಾರ್ಮಲ್ಲಿ ವೀಕ್ಷಣೆಗೆ ಲಭ್ಯವಿದ್ದು, ಆಸಕ್ತರು‌ ನೋಡಬಹುದು.

Digiqole Ad

ಈ ಸುದ್ದಿಗಳನ್ನೂ ಓದಿ