• 7 ಡಿಸೆಂಬರ್ 2024

ಗ್ರಾಮ ಪಂಚಾಯತ್ ಅಧಿಕಾರಿಗಳ – ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸರಕಾರ ತಕ್ಷಣ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡಂಜಿ ಆಗ್ರಹ :

 ಗ್ರಾಮ ಪಂಚಾಯತ್ ಅಧಿಕಾರಿಗಳ – ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸರಕಾರ ತಕ್ಷಣ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡಂಜಿ ಆಗ್ರಹ :
Digiqole Ad

ಗ್ರಾಮ ಪಂಚಾಯತ್ ಅಧಿಕಾರಿಗಳ – ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸರಕಾರ ತಕ್ಷಣ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡಂಜಿ ಆಗ್ರಹ : 
ಕಡಬ: ಕರ್ನಾಟಕ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ನೌಕರರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಮುಷ್ಕರವನ್ನು ನಡೆಸುತ್ತಿದ್ದಾರೆ. ಅಧಿಕಾರಿಗಳಿಗೆ ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಪರಿಗಣನೆ, ಜೇಷ್ಠತಾ ಪಟ್ಟಿ ಅಂತಿಮಗೊಳಿಸುವುದು, ನೌಕರರಿಗೆ ವೇತನ ಶ್ರೇಣಿ ,ಸೇವಾ ಹಿರಿತನ ಜಾರಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ರೂ 5 ಲಕ್ಷ ಆರೋಗ್ಯ ವಿಮೆ, ಸಿಬ್ಬಂದಿಗಳಿಗೆ ಮುಂಬಡ್ತಿ ಅವಕಾಶ, ಹೊರ ಜಿಲ್ಲೆಗೆ ವರ್ಗಾವಣೆಯ ಕಾನೂನು ರದ್ದು ,ಪಂಚಾಯತಿಗಳನ್ನು ಆದ್ಯತೆ ಮೇರೆಗೆ ಗ್ರೇಡ್ 1 ಮೇಲ್ದರ್ಜೆಗೆ ಏರಿಸುವುದು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳಿಗೆ ರಾಜ್ಯ ಶಿಷ್ಟಾಚಾರದ ಸೌಲಭ್ಯ , ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರುಗಳಿಗೆ ಕೇರಳ ಮಾದರಿಯ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈ ಮೊದಲೇ ಸರಕಾರಕ್ಕೆ ಸಲ್ಲಿಸಿ ಹಲವಾರು ಒತ್ತಾಯ ಒತ್ತಡಗಳನ್ನು ನೌಕರರ ಸಂಘ ಮಾಡಿತ್ತು. ಆದರೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಈಗ ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳ ಅಧಿಕಾರಿ ಸಿಬ್ಬಂದಿಗಳ ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ಯಾವುದೇ ಸೇವೆಗಳು ಸಿಗದೇ ಪರದಾಡುವಂತಾಗಿದೆ .ಜೊತೆಗೆ ಸರಕಾರಕ್ಕೆ ದಿನಂಪ್ರತಿ ಸಲ್ಲುವ ಕೋಟ್ಯಾಂತರ ರೂಪಾಯಿ ಆದಾಯದ ಮೇಲೆ ಹೊಡೆತ ಬಿದ್ದಿದೆ .ವಿಶೇಷವಾಗಿ ಜನಸಾಮಾನ್ಯರಿಗೆ ಆಗುವ ತೊಂದರೆಗಳು ಪಂಚಾಯತಿಯಿಂದ ಸರಕಾರಕ್ಕೆ ಬರುವ ಆದಾಯಕ್ಕೆ ಹೊಡೆತ ಈ ಎಲ್ಲ ಗಂಭೀರ ವಿಚಾರಗಳಿದ್ದರೂ ಸರಕಾರ ಹಾಗೂ ಪಂಚಾಯತ್ ರಾಜ್ ಮಂತ್ರಿ ಸನ್ಮಾನ್ಯ ಪ್ರಿಯಾಂಕ ಖರ್ಗೆ ಅವರು ಯಾವುದೇ ಸ್ಪಂದನೆ ನೀಡದಿರುವುದು ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕನಿಷ್ಠ ಮುಷ್ಕರ ನಿರತರನ್ನು ಕರೆಸಿ ಅವರ ಬೇಡಿಕೆಗಳ ಬಗ್ಗೆ ವಿಚಾರ ವಿಮರ್ಶೆ, ಬೇಡಿಕೆಗಳನ್ನ ಈಡೇರಿಸುವ ಭರವಸೆ ಮತ್ತು ಕ್ರಮಗಳನ್ನು ಕೈಗೊಳ್ಳದೆ ಇರುವಂತದ್ದು ಖಂಡನೀಯ. ಪ್ರತಿ ಸಾರಿ ರಾಜ್ಯ ಸರಕಾರ ಇಂತಹ ಸಮಸ್ಯೆಗಳು ಬಂದಾಗ ಹಿಂದಿನ ಸರಕಾರದ ಕಡೆ, ಕೇಂದ್ರ ಸರಕಾರದ ಕಡೆ ಕೈ ತೋರಿಸಿಕೊಳ್ಳುವಂತಹ ಪಲಾಯನವಾದದ ನೀತಿಯನ್ನು ಅನುಸರಿಸುತ್ತಿರುವುದು ಆಡಳಿತ ವ್ಯವಸ್ಥೆ ಕುಸಿದು ಹೋಗಿರುವುದಕ್ಕೆ ಸಾಕ್ಷಿಯಾಗಿದೆ .
ಹಾಗಾಗಿ ಸರಕಾರ, ಮುಖ್ಯಮಂತ್ರಿಗಳು ಸಂಬಂಧಿಸಿದ ಮಂತ್ರಿಗಳು ತಕ್ಷಣ ಸ್ಪಂದನೆಯನ್ನು ನೀಡಿ ಧರಣಿ ನಿರತರ ಬೇಡಿಕೆಗಳನ್ನು ಪರಿಶೀಲಿಸಿ, ಈಡೇರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ರಾಜ್ಯಾದ್ಯಂತ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳಿಗೆ ಮುಕ್ತಿ ನೀಡುವ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರು , ವಿಧಾನ ಪರಿಷತ್ ಉಪಚುನಾವಣೆಯ ದ.ಕ ಜಿಲ್ಲಾ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕರಾದ ರಾಕೇಶ್ ರೈ ಕೆಡೆಂಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಹಳ ಪ್ರಾಮುಖ್ಯವಾಗಿ ಉಡುಪಿ ಜಿಲ್ಲೆಯನ್ನು ಒಳಗೊಂಡಂತೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಉಪ ಚುನಾವಣೆಯು ನಡೆಯುತ್ತಿದ್ದು, ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ,ಸದ್ರಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪರ್ಧಿಸುವ ನೈತಿಕತೆಯೇ ಇಲ್ಲ. ಆದರೂ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸರಿಯಾದ ಉತ್ತರವನ್ನು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಜವಾಬ್ದಾರಿಯುತ ಜನಪ್ರತಿನಿಧಿ ಮತದಾರರ ಬಂಧುಗಳು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ