ಕೇರಳ: 75 ರ ವಯೋವೃದ್ಧನಲ್ಲಿ ಮ್ಯೂರಿನ್ ಟೈಫಸ್ ರೋಗ ದೃಢ.
ಕೇರಳ: 75 ರ ವಯೋವೃದ್ಧನಲ್ಲಿ ಮ್ಯೂರಿನ್ ಟೈಫಸ್ ರೋಗ ದೃಢ.
ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರದಲ್ಲಿ ವಿದೇಶದಿಂದ ಬಂದಿದ್ದ 75 ವರ್ಷದ ವೃದ್ಧರೊಬ್ಬರಲ್ಲಿ ಮ್ಯೂರಿನ್ ಟೈಫಸ್ ರೋಗವು ದೃಢಪಟ್ಟಿದೆ. ರೋಗಿಯು ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಲ್ಲೂರು ಸಿಎಂಸಿಯಲ್ಲಿ ನಡೆದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಮಲೇರಿಯಾ ಜ್ವರವನ್ನು ಹೋಲುವ ಬ್ಯಾಕ್ಟೀರಿಯದ ಕಾಯಿಲೆಯು ಭಾರತದಲ್ಲಿ ಅಪರೂಪವಾಗಿ ವರದಿಯಾಗಿದೆ. ಮತ್ತು ಈ ರೋಗವು ನಿರ್ದಿಷ್ಟ ರೀತಿಯ ಮಲಯ ಸೊಳ್ಳೆಯಿಂದ ಹರಡುತ್ತದೆ ಆದರೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.