• 7 ಡಿಸೆಂಬರ್ 2024

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಸುಳ್ಯದ ಗ್ರಾಮೀಣ ಪ್ರತಿಭೆ ಸೋನಾ ಅಡ್ಕಾರ್ ಆಯ್ಕೆ :

 ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಸುಳ್ಯದ ಗ್ರಾಮೀಣ ಪ್ರತಿಭೆ ಸೋನಾ ಅಡ್ಕಾರ್ ಆಯ್ಕೆ :
Digiqole Ad

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಸುಳ್ಯದ ಗ್ರಾಮೀಣ ಪ್ರತಿಭೆ ಸೋನಾ ಅಡ್ಕಾರ್ ಆಯ್ಕೆ :

ಸುಳ್ಯ: 14 ವರ್ಷದ ವಯೋಮಿತಿ ಒಳಗಿನ ಯೋಗಾಸನ ಸ್ಪರ್ಧೆಯಲ್ಲಿ ವಿಶೇಷವಾಗಿ ಸಾಧನೆ ಮಾಡಿದ ಸುಳ್ಯದ ಗ್ರಾಮೀಣ ಬಾಲಪ್ರತಿಭೆ ಸೋನಾ ಅಡ್ಕಾರ್ ನವೆಂಬರ್ ನಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.
ಜಾಲ್ಸೂರಿನ ಪಯಶ್ವಿನಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆ, ಮೂಡುಬಿದಿರೆಯ ಬ್ಲೋಸಂ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆ, ಮೈಸೂರು ವಲಯ ಮಟ್ಟದ ಸ್ಪರ್ಧೆ, ಚಿತ್ರದುರ್ಗದಲ್ಲಿ 32 ಜಿಲ್ಲೆಗಳ ಸ್ಪರ್ಧಿಗಳೊಂದಿಗೆ ನಡೆದ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್ ವಿಶೇಷ ಸಾಧನೆ ಮಾಡಿ ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈಕೆ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಮತ್ತು ಶೋಭಾ ಶರತ್ ಅಡ್ಕಾರ್ ದಂಪತಿಯ ಪುತ್ರಿ.

Digiqole Ad

ಈ ಸುದ್ದಿಗಳನ್ನೂ ಓದಿ