ಉದ್ಯೋಗದ ಸಂದರ್ಶನಕ್ಕೆ ಹೋದ ಯುವಕ ನಾಪತ್ತೆ
ಉದ್ಯೋಗದ ಸಂದರ್ಶನಕ್ಕೆ ಹೋದ ಯುವಕ ನಾಪತ್ತೆ
ಉದ್ಯೋಗದ ಸಂದರ್ಶನಕ್ಕೆಂದು ಮನೆಯಿಂದ ಹೋದ ಕಡೆಕಾರು ಗ್ರಾಮದ ಮನೋಜ್ (33) ನಾಪತ್ತೆಯಾಗಿದ್ದಾರೆ.
ಎಂಜಿನಿಯರಿಂಗ್ ಪದವೀಧರರಾಗಿರುವ ಅವರು ಸರಿಯಾದ ಉದ್ಯೋಗ ಲಭಿಸದೆ ಮನೆಯಲ್ಲೇ ಇರುತ್ತಿದ್ದರು. ಅ. 9ರಂದು ಹೋದವರು ಸಂಜೆಯಾದರೂ ಮನೆಗೆ ಬಂದಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿದೆ ಎನ್ನುವ ಸಂದೇಶ ಬರುತ್ತಿದೆ ಎಂದು ಮನೆಯವರು ತಿಳಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.