ಆಯುಷ್ಮಾನ್ ವಿಮೆ ಯೋಜನೆಗೆ ವೃದ್ಧಾಪ್ಯ ಕಾಯಿಲೆಗಳು ಸೇರ್ಪಡೆ :
ಆಯುಷ್ಮಾನ್ ವಿಮೆ ಯೋಜನೆಗೆ ವೃದ್ಧಾಪ್ಯ ಕಾಯಿಲೆಗಳು ಸೇರ್ಪಡೆ :
ದೇಶದಲ್ಲಿ 70 ವರ್ಷ ದಾಟಿದ ಎಲ್ಲರನ್ನೂ ಆಯುಷ್ಮಾನ್ ವಿಮೆ ಯೋಜನೆ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದ ಹಿನ್ನೆಲೆ ಹಿರಿಯ ನಾಗರಿಕರಿಗೆ ಹೆಚ್ಚುವರಿ ಆರೋಗ್ಯ ಪ್ಯಾಕೇಜ್ ಗಳನ್ನು ಆಯುಷ್ಮಾನ್ ವಿಮೆ ಯೋಜನೆಗೆ ಸೇರಿಸಲು ತಯಾರಿ ನಡೆದಿದೆ.
ವೃದ್ಧಾಪ್ಯದಲ್ಲಿ ಹೆಚ್ಚಾಗಿ ಕಂಡುಬರುವ ಕಾಯಿಲೆಗಳಾದ ಮರೆಗುಳಿತನ,ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಕೂಡ ವಿಮಾ ವ್ಯಾಪ್ತಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದು ಸುದ್ದಿಯಾಗಿದೆ. ಈ ತಿಂಗಳ ಅಂತ್ಯದೊಳಗೆ ಈ ಯೋಜನೆ ಜಾರಿಗೆ ಬರಲಿದೆ. 70 ವರ್ಷ ದಾಟಿದವರು ಆಯುಷ್ಮಾನ್ ವಿಮೆ ಲಾಭ ಪಡೆಯಲು ಅರ್ಹರು.