ಮಂಗಳೂರು ದಸರಾ ಸಂಭ್ರಮಿಸಿದ ಜನರು
ಮಂಗಳೂರು ದಸರಾ ಸಂಭ್ರಮಿಸಿದ ಜನರು
ಮಂಗಳೂರು ದಸರಾ’ ಎಂದೇ ಪಖ್ಯಾತ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಗ್ರಹದ ಭವ್ಯ ಶೋಭಾಯಾತ್ರೆಯಾದ ಬಳಿಕ ಸೋಮವಾರ ಮುಂಜಾನೆ ಶ್ರೀ ಕುದ್ರೋಳಿ ಕೆರೆಯಲ್ಲಿ ಜಲಸ್ತಂಭನದೊಂದಿಗೆ ಸಂಪನ್ನಗೊಂಡಿತು
ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು ಊರು-ಪರವೂರ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಹುಲಿವೇಷ, ಸಂಸ್ಕೃತಿ ಸಂಸ್ಕಾರದ ಸಂದೇಶ ಸಾರುವ ಒಟ್ಟು 72 ಟ್ಯಾಬ್ಲೋಗಳು, ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿತ್ತು.
ಮುಡಿ ತುಂಬ ಮಲ್ಲಿಗೆ ಮುಡಿದು, ಕರದಲ್ಲಿ ಬೆಳ್ಳಿಯ ವೀಣೆಯ ಹಿಡಿದು, ನೇರಳೆ ಬಣ್ಣದ ಸೀರೆಯ ಧರಿಸಿ ಬಗೆ ಬಗೆ ಬಂಗಾರದ ಒಡವೆಗಳಿಂದ ಸಿಂಗಾರಗೊಂಡಿದ್ದ ನಗು ಮೊಗದ-ಹೊಳಪು ಕಂಗಳ ಶಾರದೆಯನ್ನು ಕಂಡು ಭಕ್ತರು ಕೃತಾರ್ಥರಾದರು. ಶೋಭಾಯಾತ್ರೆಯುದ್ದಕ್ಕೂ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಮಳೆ ಹನಿಯುತ್ತಿದ್ದರೂ ನಾಲ್ಕೂ ದಿಕ್ಕುಗಳಿಂದ ಶೋಭಾಯಾತ್ರೆಗೆ ಜನಸಾಗರವೇ ಹರಿದು ಬಂತು. ಮಧ್ಯರಾತ್ರಿಯಂತು ಎಂ.ಜಿ.ರಸ್ತೆಯ ಪೂರ್ಣ ಜನವೋ ಜನ. ಅದು ದಾಖಲೆ ಎಂಬುವಷ್ಟರ ಮಟ್ಟಿಗೆ!