ಏನಿದು ಅಚ್ಚರಿ! ತುಳಸಿ ಗಿಡದಲ್ಲಿ ದಾಸವಾಳ 😱
ಏನಿದು ಅಚ್ಚರಿ!
ತುಳಸಿ ಗಿಡದಲ್ಲಿ ದಾಸವಾಳ 😱
ಅಜ್ಜಾವರ : ಈ ಸುಂದರ ಪ್ರಕೃತಿಯಲ್ಲಿ ಹಲವು ಅಚ್ಚರಿ ಮೂಡಿಸುವಂತಹ ವಿಸ್ಮಯಕಾರಿ ಘಟನೆಗಳು ನಡೆಯುತ್ತಾ ಇರುತ್ತದೆ. ಇದೀಗ ಸುಳ್ಯದ ಅಜ್ಜಾವರ ಎಂಬಲ್ಲಿ ತುಳಸಿ ಗಿಡದಲ್ಲಿ ದಾಸವಾಳ ಹೂ ಅರಳುವ ಮೂಲಕ ಅಚ್ಚರಿಯನ್ನು ಮೂಡಿಸಿದೆ.
ಸುಳ್ಯದ ಅಜ್ಜಾವರ ಗ್ರಾಮದ ಶಾಂತಿಮಜಲು ನಿವಾಸಿ, ಅಜ್ಜಾವರ ಶಾಲೆಯ ಅಡುಗೆ ಸಿಬ್ಬಂದಿ ಭವಾನಿ ಅವರ ಮನೆಯಲ್ಲಿ ಈ ಅಚ್ಚರಿಯ ದೃಶ್ಯ ಕಾಣಿಸಿದ್ದು, ಎಲ್ಲರನ್ನೂ ಆಶ್ಚರ್ಯಗೊಳಿಸುವಂತೆ ಮಾಡಿದೆ.
ಸುಮಾರು ನಾಲ್ಕು ಗಿಡಗಳಲ್ಲಿ ಕಳೆದ ಒಂದು ವಾರದಿಂದ ದಾಸವಾಳ ಹೂ ಬಿಡುತ್ತಿದ್ದು ಇನ್ನೂ ಕೂಡ ಹೂವಿನ ಮೊಗ್ಗುಗಳು ಕಂಡು ಬಂದಿದೆ.