ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ ‘ ಅನುರಣನ ‘ ಸ್ಪರ್ಧಾ ಮೇಳ :
ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ ‘ ಅನುರಣನ ‘ ಸ್ಪರ್ಧಾ ಮೇಳ :
ಅಖಿಲ ಭಾರತೀಯ ವಿದ್ಯಾಭಾರತಿ ಕರ್ನಾಟಕ ಹಾಗೂ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್, ಉದ್ಘಾಟಕರಾದ ಸಾಂದೀಪನಿ ಶಾಲಾ ಸದಸ್ಯರಾದ ಶ್ರೀ ಎಸ್. ಜಿ.ಕೃಷ್ಣ,
ಶಾಲಾ ಕಾರ್ಯದರ್ಶಿಗಳಾದ
ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಶ್ರೀ ಪ್ರಸನ್ನ ಭಟ್,
ಸಾಂದೀಪನಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಮಾಲ ವಿ .ಎನ್
ಶ್ರೀ ರಘುರಾಮ ಭಟ್, ಶ್ರೀರಾಮ ಶಾಲೆ ಉಪ್ಪಿನಂಗಡಿ ಮುಖ್ಯ ಶಿಕ್ಷಕರು ಹಾಗೂ ವಿದ್ಯಾಭಾರತಿ ಜಿಲ್ಲಾ ಗಣಿತ ವಿಜ್ಞಾನ ಪ್ರಮುಖರು ,
ಶ್ರೀ ಗಣೇಶ್ ವಾಗ್ಲೆ, ಶ್ರೀರಾಮ ವಿದ್ಯಾಲಯ ನೆಲ್ಯಾಡಿ ಮುಖ್ಯ ಶಿಕ್ಷಕರು ಹಾಗೂ ವಿದ್ಯಾಭಾರತಿ ಜಿಲ್ಲಾ ಸಂಸ್ಕೃತಿ ಜ್ಞಾನ ಪರಿಚಯ , ಶ್ರೀ ರಘುರಾಜ್ ಉಬರಡ್ಕ ಪ್ರಾಂತ್ಯ ಕ್ರಿಯಾಶೋಧ ಪ್ರಮುಖರು ,
ಶ್ರೀಮತಿ ಆಶಾ ಬೆಳ್ಳಾರೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾಭಾರತಿ ಪ್ರಾಂತೀಯ ಪ್ರಶಿಕ್ಷಣ ಸಹ ಪ್ರಮುಖರು
ಹಾಗೂ ವಿದ್ಯಾವರ್ಧಕ ಸಂಘಕ್ಕೆ ಸೇರಿದ ಶಾಲೆಯಿಂದ ಬಂದಂತಹ ಮುಖ್ಯಶಿಕ್ಷಕರು, ಶಿಕ್ಷಕರು, ತೀರ್ಪುಗಾರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾಂದೀಪನಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಮಾಲ ವಿ ಎನ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡುತ್ತಾ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನದ, ರಾಷ್ಟ್ರಭಿಮಾನದ ಮತ್ತು ಸಮಾಜಮುಖಿ ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗಿದೆ ಎಂದರು ಮತ್ತು ಬಂದಂತಹ ಎಲ್ಲಾ ಅತಿಥಿ ಅಭ್ಯಾಗತರನ್ನು ಆದರ ಪೂರ್ವಕವಾಗಿ ಸ್ವಾಗತಿಸಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾಭಾರತಿ ಪ್ರಾಂತೀಯ ಪ್ರಶಿಕ್ಷಣ ಸಹ ಪ್ರಮುಖರಾದ ಶ್ರೀಮತಿ ಆಶಾ ಬೆಳ್ಳಾರೆ ಯವರು ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ಕರ್ಮವನ್ನು ಚೆನ್ನಾಗಿ ಮಾಡು ಫಲದ ಅಪೇಕ್ಷೆ ಬೇಡ ಅದು ನಮ್ಮ ಪ್ರಕ್ರಿಯೆಯನ್ನು ಅವಲಂಭಿಸಿದೆ ಎಂದು ಎಲ್ಲಾ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಘಾಟಕರಾದ ಶ್ರೀ ಎಸ್ ಜಿ ಕೃಷ್ಣ ರವರು ಮಾತನಾಡಿ ಸೋಲೆ ಗೆಲುವಿನ ಮೂಲ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಲವಲವಿಕೆ ಉಂಟಾಗುದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತದೆ ಎಂದರು.
ತದನಂತರ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿ ಮಾತನಾಡಿದ ಶಾಲಾ ಸಂಚಾಲಕರು ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ರವರು ಮಾತನಾಡುತ್ತಾ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುದರಿಂದ ವಿದ್ಯಾರ್ಥಿಗಳಿಗೆ ಮುಂದೆ ಬರುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.
ಶ್ರೀರಾಮ ಶಾಲೆ ಉಪ್ಪಿನಂಗಡಿ ಮುಖ್ಯ ಶಿಕ್ಷಕರು ಹಾಗೂ ವಿದ್ಯಾಭಾರತಿ ಜಿಲ್ಲಾ ಗಣಿತ ವಿಜ್ಞಾನ ಪ್ರಮುಖರಾದ
ಶ್ರೀ ರಘುರಾಮ ಭಟ್ ರವರು ಧನ್ಯವಾದ ಗೈದರು.
ನಂತರ ವಿಜ್ಞಾನ ಹಾಗೂ ಗಣಿತ ವಿಭಾಗದಲ್ಲಿ ವಸ್ತು ಪ್ರದರ್ಶನ, ರಸಪ್ರಶ್ನೆ, ಪತ್ರವಾಚನ , ಪ್ರಯೋಗ, ಲೇಖನ ವಾಚನ ಮುಂತಾದ ವಿವಿಧ ಸ್ಪರ್ಧೆಗಳು ನಡೆಯಿತು.
ಸಂಸ್ಕೃತಿ ಮಹೋತ್ಸವದಲ್ಲಿ ಕಥಾಕಥನ, ಅಶುಭಾಷಣ, ಮೂರ್ತಿಕಲಾ, ಜಾನಪದ ನೃತ್ಯ ಸ್ಪರ್ಧೆಗಳು ನಡೆಯಿತು
ವಿಜೇತರಾದ ವಿದ್ಯಾರ್ಥಿಗಳಿಗೆ
ಸಾಂದೀಪನಿ ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ,
ಶ್ರೀ ವೆಂಕಟರಮಣ ಮಂಕುಡೆ ಕ್ಷೇತ್ರೀಯ ನೈತಿಕ ಆದ್ಯಾತ್ಮಿಕ ಶಿಕ್ಷಣ ಪ್ರಮುಖರು,
ಶ್ರೀ ರಮೇಶ್ ಬಿ ಕೆ (ವಿದ್ಯಾಭಾರತಿ ದಕ್ಷಿಣ ಕನ್ನಡ ಕಾರ್ಯದರ್ಶಿ ರವರು ಬಹುಮಾನ ವಿತರಿಸಿದರು.
ಇದರಲ್ಲಿ ವಿದ್ಯಾಭಾರತಿ ಜೊತೆ ಸಂಯೋಜನೆಗೊಂಡ ವಿವಿಧ ಶಾಲೆಯ 27 ಸಂಸ್ಥೆಗಳಿಂದ
ಒಟ್ಟು 870 ವಿದ್ಯಾರ್ಥಿಗಳು, 155 ಶಿಕ್ಷಕರು ಭಾಗವಹಿಸಿದ್ದರು.